ಧಾರವಾಡ : ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಾಗರಿಕ ಬಂದೂಕು ತರಬೇತಿ ಆರಂಭವಾಗಿದ್ದಿಲ್ಲ ಆದರೆ 2026 ಹೊಸ ವರ್ಷದ ಹೊಸ ಗಳಿಗೆ ಎನ್ನುವ ರೀತಿಯಲ್ಲಿ ಧಾರವಾಡ ಜಿಲ್ಲೆಯ ಎಲ್ಲ ನಾಗರಿಕರಿಗೆ ಉಪಯೋಗವಾಗುವಂತೆ ಮಾನ್ಯ ಶ್ರೀ ಗುಂಜನ್ ಆರ್ಯ IPS ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರು( ಪೊಲೀಸ್ ವರಿಷ್ಠಾಧಿಕಾರಿಗಳು) ಅವರ ಮಾರ್ಗದರ್ಶನದಲ್ಲಿ ನಾಗರಿಕ ಬಂದೂಕು ತರಬೇತಿಯು ಯಶಸ್ವಿಯಾಗಿ ನಡೆಯಿತು.

ಹಾಗೂ ನಾಗರಿಕ ಬಂದೂಕು ತರಬೇತಿಯ ಸಮಾರೋಪ ಸಮಾರಂಭದಲ್ಲಿ ತರಬೇತಿಯಲ್ಲಿ ಭಾಗವಹಿಸಿ ಉತ್ತಮವಾಗಿ ಚಟುವಟಿಕೆ ಕಾರ್ಯಗಳಲ್ಲಿ ಎಲ್ಲರಿಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಗುಂಜನ್ ಆರ್ಯ.IPS. ಶ್ರೀ ಶಿವಾನಂದ ಕಟಗಿ.DSP. ಧಾರವಾಡ ಗ್ರಾಮೀಣ ಜಿಲ್ಲೆ, ಶ್ರೀ ಡಿ ಎಸ್ ಧನಗರ್.DYSP. ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಶ್ರೀ ಫಕ್ಕಿರೇಶ ಡೊಕ್ಕನವರ್. RPI.ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಶ್ರೀ ವಿಠ್ಠಲ ಅರೇರ .RPI. ಜಿಲ್ಲಾ ಸಶಸ್ತ್ರ ಮೀಸಲು ಪಡೆ. ಈ ನಾಗರಿಕ ಬಂದೂಕು ತರಬೇತಿಯಲ್ಲಿ ಭಾಗವಹಿಸಿದ ಆಯುಧಗಾರರಾದ ಶ್ರೀ ಯಲ್ಲಪ್ಪ ಎಂ ಕಡೇಮನಿ, ಶ್ರೀ ಬಸವರಾಜ ವಾಯ್ ಗಣಿಯಾಲ್,ಶ್ರೀ ಈರಣ್ಣ ಜಿ ಮುದ್ದನಗೌಡ್ರ, ಶ್ರೀ ಶಿವಾಜಿ ಆರ್ ಕರಿಕಟ್ಟಿ ಮತ್ತು ಹೊರಾಂಗಣ ಕವಾಯತು ಬೋಧಕರು ಶ್ರೀ ಸಂತೋಷ್ ಎಸ್ ಸಾಲಿಮಠ.
ಪ್ರಮಾಣ ಪತ್ರ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಿಂದ ನಾಗರಿಕ ಬಂದೂಕು ತರಬೇತಿಗೆ ಬಂದ ಎಲ್ಲಾ ನಾಗರಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .
ವರದಿ : ನಿತೀಶಗೌಡ ತಡಸ ಪಾಟೀಲ್




