
ಕಿರುತೆರೆ ನಟಿ ತೇಜಸ್ವೀನಿ ಹಾಗೂ ನಟ ವಿರಾಟ್ ಬಣ್ಣದ ಲೋಕದಲ್ಲಿ ಬ್ಯೂಜಿಯಾಗಿದ್ದಾರೆ. ಉದಯ ಟಿವಿಯಲ್ಲಿ ಮೂಡಿಬರುತ್ತಿರುವ ‘ರಾಧಿಕಾ’ ದಾರಾವಾಹಿಯಲ್ಲಿ ನಟಿಸಿರುವ ಇವರು ತಮ್ಮ ನಟನಾ ಪ್ರಾವಿಣ್ಯತೆಯಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ.
ನಟನಾ ಕ್ಷೇತ್ರದಲ್ಲಿ ಸೈ ಎನಿಸಿಕೊಂಡು ಕಲಾವಿದರಾಗಿ ಯಶಸ್ವಿಯಾಗಿರುವ ಇವರು ಇದೀಗ ತಮ್ಮ ಜೀವನದ ಪ್ರಮುಖ ನರ‍್ಧಾರಕ್ಕೆ ಮುಂದಾಗಿದ್ದಾರೆ. ಈ ಜೋಡಿ ಈಗ ಮದುವೆಗೆ ಸಜ್ಜಾಗಿದ್ದಾರಂತೆ. ಇವರಿಗೆ ಬೆಸ್ಟ್ ಆಪ್ ಲಕ್ ಹೇಳೋಣವೇ




