ವಿವಿಧ ಸಂಘಟನೆಗಳಿಂದ ಪ್ರಭುರಾವ ತಾಳಮಡಗಿ ಅವರಿಗೆ ಸನ್ಮಾನ
ಹುಮನಾಬಾದ : ಕರ್ನಾಟಕ ರಾಜ್ಯ ಆದಿ ಜಾಂಬವಾಭಿವೃದ್ಧಿ ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಪ್ರಭುರಾವ ತಾಳಮಡಗಿ ಅವರಿಗೆ ಹುಮನಾಬಾದ ಹಾಗೂ ಚಿಟಗುಪ್ಪ ತಾಲ್ಲೂಕಿನ ವಿವಿಧ ಸಂಘಟನೆಯ ಪದಾಧಿಕಾರಿಗಳಿಂದ ಹಾಗೂ ಮಾದಿಗ ಸಮಾಜದ ಭಾಂದವರಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸನ್ಮಾನಿಸಿ ಅಭಿನಂದಿಸಲಾಯಿತು.
ಬಳಿಕ ವಕೀಲರಾದ ವಿಜಯಕುಮಾರ ನಾತೆ ಮಾತನಾಡಿ,ಪ್ರಭುರಾವ ತಾಳಮಡಗಿ ಅವರು ಹುಟ್ಟು ಹೋರಾಟಗಾರರಿದ್ದು ಸಮಾಜದ ಪರವಾಗಿ ಅನೇಕ ಹೋರಾಟ ಮಾಡಿದ್ದಾರೆ.ಅವರ ಅವಿರತ ಶ್ರಮವನ್ನು ಗುರುತಿಸಿ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ನಮ್ಮ ಬೀದರ ಜಿಲ್ಲೆಯ ಮಾದಿಗ ಸಮಾಜದ ಪರವಾಗಿ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಹೇಳಿದರು.
ನಂತರ ಕರ್ನಾಟಕ ರಾಜ್ಯ ಆದಿ ಜಾಂಬವಾಭಿವೃದ್ಧಿ ಸಂಘದ ನೂತನ ಉಪಾಧ್ಯಕ್ಷ ಪ್ರಭುರಾವ ತಾಳಮಡಗಿ ಮಾತನಾಡಿದ್ದು ಹೀಗೆ.
ಸುರೇಶ ಗಾಂಗ್ರೆ,ಶಾಂತಕುಮಾರ ಅರಳಿ, ಸಂತೋಷ ಅತಿವಾಳ,ಜಾನ್ ಬಸನೋರ್,ಸುಧಾಕರ ಮಾಡಗೂಳ, ಮಲ್ಲಿಕಾರ್ಜುನ ತಳವಾರ,ಜೀವನ ಶಾಮತಾಬಾದ,ಲೋಕೇಶ ಮಿತ್ರ,ಶಿವರಾಜ ಸಿಂಧನಕೇರಾ,ಶಿವು ಕಟ್ಟಿಮನಿ,ನಾಗರಾಜ ಹೇರೂರಕರ್,ಶಿವಕಾಂತ ಭೂಲಾ,ಶ್ರೀಮಂತ ಮೇತ್ರೆ,ನೀಲಕಂಠ ಶೆಟ್ಟಿ,ತುಕಾರಾಮ ಹಿಂದೊಡ್ಡಿ ಸೇರಿ ಅನೇಕರು ಇದ್ದರು.
ವರದಿ : ಸಜೀಶ್ ಲಂಬುನೋರ್




