ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಆಡಿಯೋ ಬಾಂಬ್ ಸ್ಪೋಟಗೊಂಡಿದೆ. ವೈರಲ್ ಆಗಿರುವಂತ ಆಡಿಯೋದಲ್ಲಿ ಮಾಜಿ ಎಂಎಲ್ಸಿಯೊಬ್ಬರು ದಿವಂಗತ ನಟ ಅಬರೀಶ್, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿರೋದಾಗಿ ಹೇಳಲಾಗುತ್ತಿದೆ.
ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಅವರು ಆಡಿಯೋವೊಂದು ವೈರಲ್ ಆಗಿದೆ.ಆ ಮೂಲಕ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯನ್ನೇ ಹುಟ್ಟು ಹಾಕಿದೆ. ಜೆಡಿಎಸ್ ಕಾರ್ಯಕರ್ತರೊಂದಿಗೆ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಮಾತನಾಡಿರುವಂತ ದೂರವಾಣಿ ಸಂಭಾಷಣೆಯ ಆಡಿಯೋ ಅದಾಗಿ ಎನ್ನಲಾಗಿದೆ. ಅದರಲ್ಲಿ ಅಶ್ಲೀಲ, ಅವಾಚ್ಯ ಪದಗಳನ್ನು ಬಳಸಿ ಮಾತನಾಡಿದ್ದಾರೆ ಎನ್ನಲಾಗಿದೆ.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ದಿವಂಗತ ನಟ ಅಂಬರೀಶ್ ಬಗ್ಗೆಯೂ ತೀವ್ರ ವಾಗ್ಧಾಳಿ ನಡೆಸಿರುವಂತ ಎಲ್ ಆರ್ ಶಿವರಾಮೇಗೌಡ ಅವರು, ಮಾತಿನ ಬರದಲ್ಲಿ ಏಕ ವಚನದಲ್ಲೇ ಕಿಡಿಕಾರಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಲೋಕಸಭೆ ಉಪ ಚುನಾವಣೆಯ ಸಂದರ್ಭದಲ್ಲಿ ನನ್ನಿಂದ 36 ಕೋಟಿ ಖರ್ಚಿ ಮಾಡಿಸಿದರು. ಆದರೇ ಟಿಕೆಟ್ ನೀಡದೇ ನನ್ನನ್ನು ಮೋಸಗೊಳಿಸಿದ್ದಾಗಿ ವೈರಲ್ ಆಗಿರೋ ಆಡಿಯೋದಲ್ಲಿ ಆಕ್ರೋಶವನ್ನು ಹೊರಹಾಕಿದ್ದಾರೆ.
ಇನ್ನೂ ದಿವಂಗತ ನಟ ಅಂಬರೀಶ್ ಅವರ ಬಗ್ಗೆ ಜೆಡಿಎಸ್ ಪಕ್ಷದಲ್ಲಿ ಒಕ್ಕಲಿಗ ಸಮುದಾಯದ ನಾಯಕರನ್ನು ಬೆಳೆಯೋದಕ್ಕೆ ಅವಕಾಶ ನೀಡಲಿಲ್ಲ. ಅಂಬರೀಶ್ ಅವರನ್ನು ಕಾಂಗ್ರೆಸ್ ಗೆ ಕರೆದುಕೊಂಡು ಬಂದೆ. ಆದರೇ ಅತ ತೊಳೆದು ಬಿಟ್ಟು ಹೋದ. ಆ ಬಳಿಕ ಕೆಲ ಅಶ್ಲೀಲ ಪದಗಳನ್ನು ಪಕ್ಷ ತೊರೆದು ಹೋದ ಬಗ್ಗೆ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಅವರು ಮಾತನಾಡಿದ್ದಾರೆ ಎನ್ನಲಾಗಿದೆ.




