ಬಂಗಾರ ಪ್ರಿಯರಿಗೆ ಅಕ್ಷರಶಃ ಶಾಕ್ ನೀಡುವ ಸುದ್ದಿಯೊಂದು ಹೊರಬಿದ್ದಿದೆ. ಚಿನ್ನದ ಬೆಲೆ ಇತಿಹಾಸದಲ್ಲೇ ಹಿಂದೆಂದೂ ಕಾಣದ ಮಟ್ಟಕ್ಕೆ ಏರಿಕೆಯಾಗಿದ್ದು, ಹೊಸ ದಾಖಲೆ ನಿರ್ಮಿಸಿದೆ.
ಪ್ರತಿ 10 ಗ್ರಾಂ ಶುದ್ಧ ಚಿನ್ನದ ಬೆಲೆ ಈಗ ₹1,78,850ಕ್ಕೆ ತಲುಪುವ ಮೂಲಕ ಸಾಮಾನ್ಯ ಜನರಿಗೆ ಗಗನಕುಸುಮವಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳ ಪರಿಣಾಮವಾಗಿ ಭಾರತೀಯ ಮಾರುಕಟ್ಟೆಯಲ್ಲೂ ಚಿನ್ನದ ದರ ವಿಪರೀತವಾಗಿ ಏರಿಕೆಯಾಗಿದೆ.
ಈಗಿನ ವೇಗವನ್ನು ನೋಡಿದರೆ, 10 ಗ್ರಾಂ ಚಿನ್ನದ ಬೆಲೆ ಶೀಘ್ರದಲ್ಲೇ ₹1.80 ಲಕ್ಷದ ಗಡಿ ದಾಟುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ.




