————————————ಕಿವೀಸ್ ವಿರುದ್ಧದ ೪ ನೇ ಟ್ವೆಂಟಿ-೨೦
ವಿಶಾಖಪಟ್ಟಣಂ: ಭಾರತ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ವಿರುದ್ಧ ನಡೆದ ೫ ಪಂದ್ಯಗಳ ಟ್ವೆಂಟಿ-೨೦ ಸರಣಿಯ ನಾಲ್ಕನೇ ಪಂದ್ಯದಲ್ಲಿ ೫೦ ರನ್ ಗಳಿಂದ ಸೋಲನುಭವಿಸಿದೆ.
ಇಲ್ಲಿನ ವಿಸಿಎ- ವಿಡಿಸಿಎ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ಮುಗಿದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು ನಿಗದಿತ ೨೦ ಓವರುಗಳಲ್ಲಿ ೭ ವಿಕೆಟ್ಗೆ ೨೧೫ ರನ್ ಗಳಿಸಿತು. ಪ್ರತಿಯಾಗಿ ಆಡಿದ ಭಾರತ ತಂಡವು ೧೮.೪ ಓವರುಗಳಲ್ಲಿ ೧೬೫ ರನ್ ಗಳಿಗೆ ಆಲೌಟಾಗಿ ಸರಣಿಯಲ್ಲಿ ಮೊದಲ ಸೋಲು ಅನುಭವಿಸಿತು. ಹೀಗಾಗಿ ಸರಣಿಯಲ್ಲಿ ಭಾರತ ೩-೧ ರಿಂದ ಮುನ್ನಡೆಯಲ್ಲಿದ್ದು, ಒಂದು ಪಂದ್ಯ ಬಾಕಿ ಇದೆ.
ಸ್ಕೋರ್ ವಿವರ
ನ್ಯೂಜಿಲೆಂಡ್ ೨೦ ಓವರುಗಳಲ್ಲಿ ೭ ವಿಕೆಟ್ಗೆ ೨೧೫
ಓಮ್ ಶೆರ್ಟ್ ೬೨ ( ೩೬ ಎಸೆತ, ೭ ಬೌಂಡರಿ, ೩ ಸಿಕ್ಸರ್)
ಸೆವೋನ್ ಕಾನ್ವೆ ೪೪ ( ೨೩ ಎಸೆತ, ೪ ಬೌಂಡರಿ, ೩ ಸಿಕ್ಸರ್)
ಡರೆಲ್ ಮಿಚೆಲ್ ೩೯ (೧೮ ಎಸೆತ, ೨ ಬೌಂಡರಿ, ೩ ಸಿಕ್ಸರ್)
ಭಾರತ ೧೮.೪ ಓವರುಗಳಲ್ಲಿ ೧೬೫
ಶಿವಂ ದುಬೈ ೬೫ ( ೨೩ ಎಸೆತ, ೩ ಬೌಂಡರಿ, ೭ ಸಿಕ್ಸರ್)
ರಿಂಕು ಸಿಂಗ್ ೩೯ ( ೩೦ ಎಸೆತ, ೩ ಬೌಂಡರಿ, ೨ ಸಿಕ್ಸರ್)
ಸಂಜು ಸ್ಯಾಮ್ಸನ್ ೨೪ ( ೧೫ ಎಸೆತ, ೩ ಬೌಂಡರಿ, ೧ ಸಿಕ್ಸರ್)




