ಜೋಯಿಡಾ: ತಾಲೂಕಿನ ಶ್ರೀ ಕ್ಷೇತ್ರ ಉಳವಿ ಚೆನ್ನಬಸವಣ್ಣನ ಜಾತ್ರೆ ಜನವರಿ 25 ರಿಂದ ಪ್ರಾರಂಭವಾಗಿದ್ದು ಇಂದು ಬುಧವಾರ ಚೆನ್ನಬಸವೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಸಂಜಯ ಕಿತ್ತೂರ ಅವರು ದೇವಸ್ಥಾನದ ಗೋಪುರಕ್ಕೆ ಬಂಗಾರದ ಕಳಸ ತೊಡಿಸಿ ಅದ್ದೂರಿಯಾಗಿ ಚಾಲನೆ ನೀಡಿದರು.
ಚೆನ್ನಬಸವಣ್ಣನ ಬೆಳ್ಳಿ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ ಜಾತ್ರೆ ಅಚ್ಚುಕಟ್ಟಾಗಿ ನಡೆಯಲಿ ಎಂದು ದೇವರಲ್ಲಿ ಬೇಡಿಕೊಳ್ಳಲಾಯಿತು.
ಉಳವಿ ಟ್ರಸ್ಟ್ ಕಮಿಟಿ ಹಾಗೂ ಗ್ರಾಮ ಪಂಚಾಯತ ವತಿಯಿಂದ ಜಾತ್ರೆಯಲ್ಲಿ ಯಾವುದೇ ತೊಂದರೆ ಆಗದಂತೆ ಭಕ್ತರಿಗೆ ಕುಡಿಯುವ ನೀರು ,ದಾಸೋಹ ,ತಂಗಲು ಉತ್ತಮವಾದ ವ್ಯವಸ್ಥೆ ಮಾಡಲಾಗಿದೆ.

ಚಕ್ಕಡಿಗಾಡಿಗಳಿಗೆ ದೇವಸ್ಥಾನ ಹಿಂಭಾಗದ ಗದ್ದೆಯಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ.ಇನ್ನೂಳಿದಂತೆ ಜೋಯಿಡಾ ಸಿಪಿಐ ಚಂದ್ರಶೇಖರ ಹರಿಹರ ಹಾಗೂ ಜೋಯಿಡಾ ಪಿ.ಎಸ್ ಐ ಮಹೇಶ ಮಾಳಿ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ ನಡೆಸಲಾಗಿದ್ದು,ವಾಕಿಟಾಕಿ ಹಾಗೂ ಸಿಸಿ ಕ್ಯಾಮರಾದ ಮೂಲಕ ಕಳ್ಳರ ಮೇಲೆ ನಿಘಾ ಇಡಲಾಗಿದೆ.

ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ,ಜೋಯಿಡಾ ಶಾಸಕ ಆರ್ ವಿ ದೇಶಪಾಂಡೆ ಅವರು ಚೆನ್ನಬಸವಣ್ಣನ ಉಳವಿ ಜಾತ್ರೆಗೆ ಸಂಪೂರ್ಣ ಸಹಕಾರ ನೀಡಿದ್ದು ಫೆ 3 ರಥೋತ್ಸವದ ದಿನ ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ಉಳವಿ ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಮೋಕಾಶಿ, ಟ್ರಸ್ಟ್ ಕಮಿಟಿ ಅಧ್ಯಕ್ಷ ಸಂಜಯ ಕಿತ್ತೂರ,ಪ್ರಧಾನ ಅರ್ಚಕ ಕಲ್ಮಠ ಶಾಸ್ತ್ರಿ, ಹಾಲಪ್ಪ ಚಕ್ರಸಾಲಿ, ರುದ್ರಗೌಡ ಜೆ,ಸಿದ್ದನಗೌಡ ಪಾಟೀಲ್,ಅರ್ಚಕರು ಇತರರು ಇದ್ದರು.
ವರದಿ: ನಿತೀಶಗೌಡ ತಡಸ ಪಾಟೀಲ್




