Ad imageAd image

ತಾಲೂಕು ಮಟ್ಟದ ನವ ಜೀವನೋತ್ಸವ ಕಾರ್ಯಕ್ರಮ ಮತ್ತು ಅಭಿನಂದನ ಕಾರ್ಯಕ್ರಮ

Bharath Vaibhav
ತಾಲೂಕು ಮಟ್ಟದ ನವ ಜೀವನೋತ್ಸವ ಕಾರ್ಯಕ್ರಮ ಮತ್ತು ಅಭಿನಂದನ ಕಾರ್ಯಕ್ರಮ
WhatsApp Group Join Now
Telegram Group Join Now

ಮಲ್ಲಮನ ಬೆಳವಡಿ: ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಭಾ ಭವನ,ಮಲ್ಲಮ್ಮನ ಬೆಳವಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ. ಸಿ ಟ್ರಸ್ಟ್ ( ರಿ ).ಬೈಲಹೊಂಗಲ ಇವರ ವತಿಯಿಂದ ತಾಲೂಕು ಮಟ್ಟದ ನವ ಜೀವನೋತ್ಸವ ಕಾರ್ಯಕ್ರಮ ಮತ್ತು ಅಭಿನಂದನ ಕಾರ್ಯಕ್ರಮ ಮಾಡಲಾಯಿತು. ಕಾರ್ಯಕ್ರಮದಲ್ಲಿ ಡಾ.ಡಿ ವೈ ಗರಗದ್ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ಬೆಳಗಾವಿ 1 ಜಿಲ್ಲೆಯ ಗೌರನ್ವಿತ ನಿರ್ದೇಶಕರು ಸತೀಶ್ ನಾಯ್ಕ್,ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್ ಬೈಲಹೊಂಗಲ ತಾಲೂಕು ಯೋಜನಾಧಿಕಾರಿ ವಿಜಯ ಕುಮಾರ್, ಜಿಲ್ಲಾ ಜನಜಾಗೃತಿ ನಿಕಟ ಪೂರ್ವ ಅಧ್ಯಕ್ಷರು ಆದ ವಿಠ್ಠಲ್ ಪಿಸೆ, ಉಪಾಧ್ಯಕ್ಷರು ಆದ ಮಹಾಂತೇಶ್ ಕಾಮತ್, ಜಿಲ್ಲಾ ಜನಜಾಗೃತಿ ಸದಸ್ಯರಾದ ರತ್ನಾ ಗೋದಿ, ಮಹೇಶ್ ಕೊಟಗಿ,ದೊಡವಾಡ ಪೊಲೀಸ್ ಠಾಣೆಯ PSI ಗಂಗಾಧರ್ ಹಂಪಣ್ಣನವರ, ಯುವ ಮುಖಂಡರು ಉಡಿಕೇರಿಯ ಉಮೇಶ್ ಹಿತ್ತಲಮನಿ ಉಪಸ್ಥಿತರಿದ್ದರು.

ಉದ್ಘಾಟನೆ ಮಾಡಿದ ಡಾ. ಡಿ ವೈ ಗರಗದ್ ಅವರು ಮಾತಾಡಿ ಕುಡಿತ ಅನ್ನೋದು ಸಮಾಜದಲ್ಲಿ ಅತ್ಯಂತ ಕೆಟ್ಟ ವ್ಯಸನ ಆಗಿದ್ದು ಇದ್ರಿಂದ ಎಲ್ಲರೂ ಹೊರ ಬಂದು ಹೊಸ ಜೀವನ ಕಟ್ಟಿಕೊಂಡ ನಿಮ್ಮ ಜೀವನ ಉಜ್ವಲವಾಗಿರಲಿ, ಇದಕ್ಕೆ ಅವಕಾಶ ಮಾಡಿಕೊಟ್ಟ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪೂಜ್ಯ ಖಾವಂದರ ದಂಪತಿಗಳಿಗೆ ಧನ್ಯವಾದಗಳು ತಿಳಿಸಿದರು. ದೊಡವಾಡ ಪೊಲೀಸ್ ಠಾಣೆಯ ಪಿಎಸ್ಐ ಗಂಗಾಧರ್ ಹಂಪಣ್ಣನವರ ಮಾತಾಡಿ ಮದ್ಯ ವ್ಯಸನ ಮಾಡಿ ಜೀವನ ಹಾಳು ಮಾಡಿಕೊಳ್ಳಬೇಡಿ,ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ. ಒಳ್ಳೆಯ ವ್ಯಕ್ತಿಗಳಾಗಿ ಸಮಾಜದಲ್ಲಿ ಗೌರವದಲ್ಲಿ ಬದುಕಿರಿ. ಯೋಜನೆಯ ಕಾರ್ಯಕ್ರಮಗಳಿಂದ ಜನರಿಗೆ ಸಹಾಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ವಿಠ್ಠಲ್ ಪಿಸೆ ಅವರು ಯೋಜನೆ ಮಾಡಿದ ಮದ್ಯ ವರ್ಜನ ಶಿಬಿರದ ಪ್ರತಿ ಫಲ ಇಂದು ಎಷ್ಟೋ ಮನೆ ನೆಮ್ಮದಿಯಿಂದ ಇರುವಂತಾಗಿದೆ ಎಂದರು. ಜಿಲ್ಲಾ ನಿರ್ದೇಶಕರು ಮಾತಾಡಿ ಯೋಜನೆಯ ಸಮಾಜ ಮುಖಿ ಕಾರ್ಯಕ್ರಮಗಳನ್ನು ವಿಸ್ತರವಾಗಿ ತಿಳಿಸಿದರು. ಎಲ್ಲಾರ ಮುಂದಿನ ಜೀವನ ಸುಖ ಸಂತೋಷ ವಾಗಿರಲಿ, ಸುಂದರವಾಗಿರಲಿ ಎಂದರು.

ಪ್ರಾದೇಶಿಕ ವ್ಯಾಪ್ತಿಯ ಮೇಲ್ವಿಚಾರಕರು ಉಮೇಶ್ ಅವರು ನಿರೂಪಣೆ ಮತ್ತು ಧನ್ಯವಾದಗಳು ಮಾಡಿದರು. ಬೆಳವಡಿ ವಲಯ ಮೇಲ್ವಿಚಾರಕ ಸಂತೋಷ ಸ್ವಾಗತ ಮಾಡಿದರು. ಕೆಂಗನೂರು ವಲಯದ ಮೇಲ್ವಿಚಾರಕರ ಮಹಾಂತೇಶ್ ಕಾಟಿ,ತಾಲೂಕಿನ ಜ್ಞಾನ ವಿಕಾಸ ಸಮನ್ವಯಧಿಕಾರಿ ಶೈಲಾ ಜೆ ಇವರು ಕಾರ್ಯಕ್ರಮ ನಡೆಸಿಕೊಟ್ಟರು.ಯೋಜನೆಯ ವತಿಯಿಂದ ನಡೆಸುವ ಶಿಬಿರಗಳಲ್ಲಿ ಭಾಗವಹಿಸಿ,ಮದ್ಯ ವ್ಯಸನ ಬಿಟ್ಟು ಹೊಸ ಜೀವನ, ನೆಮ್ಮದಿಯ ಜೀವನ ನಡೆಸುತ್ತಿರುವ ಎಲ್ಲಾ ನವಜೀವನ ಸಮಿತಿಯ ಸದಸ್ಯರನ್ನು ಗುರುತಿಸಿ ಶಾಲು ಹಾಕಿ ಅಭಿನಂದನೆ ಮಾಡಲಾಯಿತು. ತಾಲೂಕಿನ ಎಲ್ಲಾ ನವಜೀವನ ಸಮಿತಿಯ ಸದಸ್ಯರು ಅವರ ಕುಟುಂಬ ಸಮೇತ ಬಂದು ಉಪಸ್ಥಿತರಿದ್ದರು. ಯೋಜನೇಯ ಸೇವಾಪ್ರತಿನಿಧಿಗಳು,ಒಕ್ಕೂಟದ ಪದಾಧಿಕಾರಿಗಳು, ಸಂಘಗಳ ಸದಸ್ಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ವರದಿ : ದುಂಡಪ್ಪ ಹೂಲಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!