ಸುರಪುರ: ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ಕೃಷ್ಣಾ ನದಿ ತೀರದಲ್ಲಿರುವ ತಿಂಥಣಿ ಮೌನೇಶ್ವರ ದೇವಸ್ಥಾನ ಪ್ರಸಿದ್ಧ ಹಿಂದೂ ಮುಸ್ಲಿಂ ಭಾವೈಕ್ಯತ ಕೇಂದ್ರವಾಗಿದೆ ೧೨ನೇ ಶತಮಾನದ ಸಂತ ಮೌನೇಶ್ವರರು ಇಲ್ಲಿ ಗುಹಾಪ್ರವೇಶ ಮಾಡಿದ್ದರು ಎನ್ನಲಾಗಿದ್ದು ಇದನ್ನು ದಕ್ಷಿಣ ಕಾಶಿ ಎಂದು ಕರೆಯುತ್ತಾರೆ ಪ್ರತಿ ವರ್ಷ ಭಾರತ ಹುಣ್ಣಿಮೆಯಂದು ೫ ದಿನಗಳ ಕಾಲ ಇಲ್ಲಿ ಭವ್ಯ ಜಾತ್ರೆ ನಡೆಯುತ್ತದೆ
ಅಲ್ಲಮಪ್ರಭುಗಳಂತೆ ಮಹಾನ್ ತಪಸ್ವಿಯಾಗಿದ್ದ ಮೌನೇಶ್ವರರ ತತ್ವಗಳು ಎಂದಿಗೂ ಹಿಂದೂ ಮುಸ್ಲಿಂ ಸಾಮರಸ್ಯದ ದಾರಿ ದೀಪವಾಗಿದೆ.
ಮೌನೇಶ್ವರರನ್ನು ಹಿಂದುಗಳು ಮೌನೇಶ್ವರ ಎಂದು ಮತ್ತು ಮುಸಲ್ಮಾನರು ಮೌನೊದ್ದೀನ್ ಎಂದು ಪೂಜಿಸುತ್ತಾರೆ.

ಪ್ರತಿ ವರ್ಷದಂತೆ ಈ ವರ್ಷವ ಮುನೇಶ್ವರ ಪಲ್ಲಕ್ಕಿ ಹೊರಬಂದು ಪುರವಂತರ ಹಾಗೂ ವಿವಿಧ ವಾದ್ಯಗಳೊಂದಿಗೆ ಗಂಗಾ ಸ್ಥಳಕ್ಕೆ ತೆರಳಿ ರಾತ್ರಿ ೧೧ ಗಂಟೆಗೆ ದೇವಸ್ಥಾನ ಪ್ರವೇಶಗೊಳ್ಳುತ್ತದೆ . ಜ ೩೦ ರಂದು ದ್ವಾದಶಿ ಪಲ್ಲಕ್ಕಿ ಸೇವೆ ಜ ೩೧ ರಂದು ತ್ರಯೋದಶಿ ಧಾರ್ಮಿಕ ಕಾರ್ಯಕ್ರಮ ಜವಳ ಸಾಮೂಹಿಕ ಉಪನಯನ ಮತ್ತು ಸಂಜೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಪೇ ೧ ರಂದು ಸಂಜೆ ೫ ಗಂಟೆಗೆ ಮೌನೇಶ್ವರರ ರಥೋತ್ಸವ ಭಕ್ತ ಸಮೂಹದೊಂದಿಗೆ ಅದ್ದೂರಿಯಾಗಿ ಜರುಗಲಿದೆ. ವಿವಿಧ ರಾಜ್ಯ ಮತ್ತು ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಮೂಲಕ ಜಾತ್ರೆಗೆ ಆಗಮಿಸಿ ಕೃಷ್ಣಾ ನದಿಯಲ್ಲಿ ತೀರ್ಥ ಸ್ನಾನ ಗೈದು ನಂತರ ಮೌನೇಶ್ವರನ ದರ್ಶನ ಪಡೆಯುತ್ತಾರೆ.
ಪ್ರಶಾಂತಳಾಗಿ ಹರಿವ ಕೃಷ್ಣೆ ಜಗದ್ಗುರು ಮೌನೇಶ್ವರರು ಗುರು ಪುತ್ರ ಗಂಗಪ್ಪಯ್ಯನೊಂದಿಗೆ ವಿಚಾರಧಾರೆ ನಡೆಸುತ್ತಿರುವಾಗ ಕೃಷ್ಣಾ ನದಿಯು ತುಂಬಿ ಬೋರ್ಖರಯುತ ಪ್ರಭಾಸದಿಂದ ಹರಿಯುತ್ತಿತ್ತು ಗುರು ಶಿಷ್ಯರು ಮಾತನಾಡುವ ಮಾತುಗಳು ಸರಿಯಾಗಿ ಕೇಳಿಸಲಿಲ್ಲ ಆಗ ಮೌನೇಶ್ವರರು ಕೃಷ್ಣಾ ನದಿಯತ್ತ ಮುಖ ಮಾಡಿ ಸಿಟ್ಟಿನಿಂದ ಎಷ್ಟೊಂದು ಶಬ್ದ ನಿನ್ನದು ದೀರ್ಘಾವಧಿಯ ನಂತರ ತಂದೆ ಮಗ ಏನೋ ಮಾತನಾಡಬೇಕೆಂದು ಇಚ್ಚಿಸಿ ಕುಳಿತರೆ ನಿನ್ನ ಅಬ್ಬರವೇ ಕೇಳಿಸುತ್ತಿದೆ ಪ್ರಶಾಂತಳಾಗು ಎಂದು ಆಜ್ಞಾಪಿಸಿದಾಗ ತಕ್ಷಣ ಆರ್ಭಟ ಅಡಗಿ ಹೋಗಿ ನದಿಯ ಎಂದೆ ಒಂದು ಮೈಲಿ ಮುಂದೆ ಒಂದು ಮೈಲಿ ಶಬ್ದ ಮಾಡದೆ ಪ್ರಶಾಂತಳಾಗಿ ಹರಿಯ ತೊಡಗಿದಳು ಇದು ಜಗದ್ಗುರು ಮೌನೇಶ್ವರರ ಇತಿಹಾಸದಿಂದ ತಿಳಿದು ಬರುತ್ತದೆ
ವರದಿ: ಶೇಕಪ್ಪ ಮಾದರ




