ಬೆಂಗಳೂರು: ಬೆಂಗಳೂರಿನಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ.
ಡ್ರಂಕ್ ಅಂಡ್ ಡ್ರೈವ್ ಪ್ರಕರಣದಲ್ಲಿ ಸಿಕ್ಕಿಬಿದ್ದ 19,548 ಚಾಲಕರ ಡಿಎಲ್ ಅಮಾನತುಗೊಳಿಸಲು ಶಿಫಾರಸು ಮಾಡಲಾಗಿದೆ. 4479ಕ್ಕೂ ಅಧಿಕ ಚಾಲನಾ ಪರವಾನಗಿಗಳನ್ನು ಈಗಾಗಲೇ ಮೂರು ತಿಂಗಳ ಅವಧಿಗೆ ಅಮಾನತು ಮಾಡಲಾಗಿದೆ.
ಬೆಂಗಳೂರಿನಲ್ಲಿ 2025ರಲ್ಲಿ ಬರೋಬ್ಬರಿ 39,349 ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು ದಾಖಲಾಗಿವೆ. ಪಾನಮತ್ತರಾಗಿ ವಾಹನ ಚಾಲನೆ ಮಾಡುವಾಗ ಸಿಕ್ಕಿಬಿದ್ದ ಚಾಲಕರು ತಲಾ 10 ಸಾವಿರ ರೂ. ದಂಡ ಪಾವತಿಸಿದ್ದಾರೆ.
ಎರಡನೇ ಬಾರಿಗೆ ಮದ್ಯಪಾನ ಮಾಡಿ ಚಾಲನೆ ಮಾಡಿ ಸಿಕ್ಕಿಬಿದ್ದ ಚಾಲಕರಿಗೆ 15 ಸಾವಿರ ರೂ. ದಂಡ ಮತ್ತು 6 ತಿಂಗಳ ಅವಧಿಗೆ ಡಿಎಲ್ ಅಮಾನತಿಗೆ ಶಿಫಾರಸು ಮಾಡಲಾಗುವುದು ಎಂದು ಹೇಳಲಾಗಿದೆ.




