ಬೆಂಗಳೂರು: ಪೀಣ್ಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಆಟೋ ಟ್ಯಾಕ್ಸಿ ಚಾಲಕರ ಸಂಘ ದ ಅಧ್ಯಕ್ಷ ಮುನ್ನ ಹಾಗೂ ಟಿಪ್ಪು ಸುಲ್ತಾನ್ ಅಭಿಮಾನಿ ಬಳಗದ ಶೇಕ್ ಇಮ್ರಾನ್ ಗೌಸ್ ನೇತೃತ್ವದಲ್ಲಿ ದೇಶದ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಲಾಯಿತು . ಸ್ವಾಮಿ ವಿವೇಕಾನಂದ ಶಾಲೆಯ ಮಕ್ಕಳು ದೇಶದ ಸ್ವತಂತ್ರ ಹೋರಾಟಗಾರರ ವೇಷಭೂಷಣಗಳಲ್ಲಿ ಕಾಣಿಸಿಕೊಂಡು ದೇಶದ ತಿರಂಗಾ ಧ್ವಜ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಶಾಲಾ ಮಕ್ಕಳಿಗೆ ಶೇಕ್ ಇಮ್ರಾನ್ ಗೌಸ್ ಅವರು ನೋಟ್ ಬುಕ್ಸ್ ಪೆನ್ನು ವಿತರಿಸಿ ಮಕ್ಕಳಿಗೆ ಸಿಹಿ ಹಂಚಿದರು . ನಂತರ ಹೆಗ್ಗನಹಳ್ಳಿ ಬಸ್ ನಿಲ್ದಾಣ ದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು . ಮುನ್ನಾಭಾಯಿ ಧ್ವಜಾರೋಹಣ ನೆರವೇರಿಸಿ ಹೆಗ್ಗನಹಳ್ಳಿ ಮುಖ್ಯ ರಸ್ತೆಯ ಮುಖಾಂತರ ಅಂದ್ರಳ್ಳಿ ರಸ್ತೆ ಫ್ರೆಂಡ್ಸ್ ಸರ್ಕಲ್ ವರೆಗೆ ಮೆರವಣಿಗೆ ಸಾಗಿ ಅಲ್ಲಿಯೂ ಕೂಡ ಧ್ವಜಾರೋಹಣ ನೆರವೇರಿಸಿ ಸಾರ್ವಜನಿಕರಿಗೆ ಅನ್ನದಾನ ಸಂತರ್ಪಣೆಗೆ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಜನ ಪ್ರಿಯ ಸಮಾಜ ಸೇವಕ ಚಿಂತಕರು ವಾಗ್ಮಿಗಳು ಬುದ್ದಿಜೀವಿಗಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ!! ಸಂಗನಬಸಪ್ಪ ಬಿರಾದಾರ್ ಅಂಬೇಡ್ಕರ್ ಅವರ ಆದರ್ಶಗಳು ನಡೆದು ಬಂದ ದಾರಿ ಇತಿಹಾಸ ಕುರಿತು ಮನ ಬಿಚ್ಚಿ ಮಾತನಾಡುವ ಮೂಲಕ ಜನರಿಗೆ ಸಂವಿಧಾನದ ಬಗ್ಗೆ ತಿಳಿಸಿ ಕೊಟ್ಟರು.
ಕಾಂಗ್ರೆಸ್ ಕಾರ್ಮಿಕ ಘಟಕ ರಾಜ್ಯ ಜಂಟಿ ಕಾರ್ಯದರ್ಶಿ ನಿಸಾರ್ ಖಾನ್, ಶೇಕ್ ಇಮ್ರಾನ್ ಗೌಸ್ ಅಂಬೇಡ್ಕರ್ ಅವರ ಕುರಿತು ಗುಣಗಾನ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಬಾನಾ ರವಿ , ಡಾ.ಬಿಎಂ ಬಳ್ಳಾರಿ, ಹೆಗ್ಗನಹಳ್ಳಿ ಬ್ಲಾಕ್ ಅಧ್ಯಕ್ಷ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಸವರಾಜ್, ತಾಸಿನ, ಸೈಯದ್ ಇಮ್ರಾನ್, ಬಶೀರ್, ಮಹಮ್ಮದ್ ಶಫಿ, ಜಬಿವುಲ್ಲಾ, ರೆಹ್ಮತ್ , ಜಹೀರ್, ರಾಜೇಶ್, ಕೃಷ್ಣಪ್ಪ, ಅಂಬೇಡ್ಕರ್ ಅಭಿಮಾನಿ ಬಳಗ ಹಾಗೂ ಟ್ಯಾಕ್ಸಿ ಚಾಲಕರಿಗೆ ಐ ಡಿ ಕಾರ್ಡ್ ವಿತರಿಸಿದರು .
ಇಂತಿಯಾಜ್ , ಜಬಿವುಲ್ಲಾ, ತಾಜ್ ಹಾಯ್ ಬೆಂಗಳೂರ್ ಪತ್ರಿಕೆಯ ಮುಖ್ಯ ವರದಿಗಾರ ಬಸವರಾಜ್ ಜಮಾದಾರ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು .
ವರದಿ: ಅಯ್ಯಣ್ಣ ಮಾಸ್ಟರ್




