ಕೋಯಿಕೋಡ್ (ಕೇರಳ): ಭಾರತದ ಮಾಜಿ ಅಥ್ರಲೀಟ್ ಹಾಗೂ ಈಗಿನ ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ ಅವರ ಪತಿ ವಿ. ಶ್ರೀನಿವಾಸನ್ ಇಂದು ಬೆಳಿಗ್ಗೆ ಅವರ ನಿವಾಸದಲ್ಲಿ ನಿಧನರಾದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ವಿ. ಶ್ರೀನಿವಾಸನ್ ಅವರಿಗೆ ೬೭ ರ್ಷ ವಯಸ್ಸಾಗಿತ್ತು. ಬೆಳಿಗ್ಗೆ ಮನೆಯಲ್ಲಿ ಕುಸಿದು ಬಿದ್ದ ಶ್ರೀನಿವಾಸನ್ ಅರ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಅವರು ಬದುಕಲಿಲ್ಲ ಎಂದು ಕುಟುಂಬದ ಮೂಗಳು ತಿಳಿಸಿವೆ.



