ಬೆಂಗಳೂರು : ಇತ್ತೀಚಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ಅನೇಕ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಇದೀಗ, ಬೆಂಗಳೂರಿನಲ್ಲಿ ಮಹಿಳೆಯ ಮೇಲೆ ಭೀಕರವಾಗಿ ಸಾಕು ನಾಯಿಯೊಂದು ದಾಳಿ ಮಾಡಿದ್ದು ಮಹಿಳೆಯ ಮುಖ ತಲೆ ಕುತ್ತಿಗೆ ಸೇರಿ 50ಕ್ಕೂ ಸ್ಟಿಚ್ ಹಾಕಲಾಗಿದೆ.
ಜನವರಿ 26ರಂದು ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಲ್ಲಿ ಈ ಮಹಿಳೆಯ ಮೇಲೆ ದಾಳಿ ಮಾಡಿದೆ. ಮಹಿಳೆ ಬೆಳಿಗ್ಗೆ ವಾಕಿಂಗ್ ಹೋಗುವಾಗ ರಸ್ತೆ ಬದಿಯಲ್ಲಿ ಏಕಾಏಕಿ ದಾಳಿ ಮಾಡಿದೆ.
ಈ ವೇಳೆ ಅಲ್ಲಿಯದ ಒಬ್ಬ ವ್ಯಕ್ತಿ ಸಹಾಯ ಸಹಾಯಕ್ಕೆ ಬರುತ್ತಾರೆ. ಆದರೂ ಕೂಡ ನಾಯಿ ಅಟ್ಯಾಕ್ ಮಾಡೋದನ್ನ ನಿಲ್ಲಿಸಲ್ಲ.
ಅಮರೇಶ್ ರೆಡ್ಡಿ ಎನ್ನುವವರಿಗೆ ಸೇರಿದ ಸಾಕೋ ನಾಯಿ ಅಟ್ಯಾಕ್ ಮಾಡಿದ್ದು ಬಿಡಿಸಲು ಬಂದ ವ್ಯಕ್ತಿಯ ಮೇಲು ಕೂಡ ದಾಳಿ ಮಾಡಿದೆ.
ಸದ್ಯ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಕುತ್ತಿಗೆ ತಲೆ ಹಾಗೂ ಮುಖಕ್ಕೆ ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ಹೊಲಿಗೆ ಹಾಕಲಾಗಿದೆ. ನಾಯಿಯ ಮಾಲೀಕರ ವಿರುದ್ಧ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.




