Ad imageAd image

ಗ್ರಾಮೀಣ ಪತ್ರಕರ್ತರಿಗೆ ಸರಕಾರಿ ಸೌಲತ್ತು ನೀಡುವಂತೆ ಮನವಿ

Bharath Vaibhav
ಗ್ರಾಮೀಣ ಪತ್ರಕರ್ತರಿಗೆ ಸರಕಾರಿ ಸೌಲತ್ತು ನೀಡುವಂತೆ ಮನವಿ
WhatsApp Group Join Now
Telegram Group Join Now

ಗ್ರಾಮೀಣ ಪತ್ರಕರ್ತರಿಗೆ ಸರಕಾರಿ ಸೌಲತ್ತುಗಳನ್ನು ನೀಡುವಂತೆ ಹಾಗೂ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಪರಿಹಾರ ನೀಡುವಂತೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ(ರಿ)ಯ ರಾಜ್ಯ ಸಮಿತಿಯು ವಿಧಾನ ಸೌಧದಲ್ಲಿ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ ವಿ ಪ್ರಭಾಕರ್ ರನ್ನು ಭೇಟಿ ಮಾಡಿತು.

ಜನವರಿ 30ರಂದು ಬೆಂಗಳೂರು ವಿಧಾನ ಸೌಧದಲ್ಲಿ ಕೆ ವಿ ಪ್ರಭಾಕರ್ ರನ್ನು ಸಂಘದ ರಾಜ್ಯ ಅಧ್ಯಕ್ಷರಾದ ಜಿ. ಎಂ ರಾಜಶೇಖರ್, ರಾಜ್ಯ ಕಾರ್ಯದರ್ಶಿ ವಸಂತ್ ಕುಮಾರ್, ರಾಜ್ಯ ಉಪಾಧ್ಯಕ್ಷರಾದ ನಿವೃತ್ತ ಸೇನಾಧಿಕಾರಿ ಕೃಷ್ಣಪ್ಪ ಹಾಗೂ ಸಮಿತಿಯ ಚಂದ್ರಶೇಖರ್ ಬೆಳಗುoಬ ಹಾಲಪ್ಪ,ಅನಿಲ್ ಚಿಕ್ಕಮಗಳೂರು, ವಿಶು ಕುಮಾರ್ ಅರಸೀಕೆರೆಯವರು ಭೇಟಿ ಮಾಡಿದರು.

ಗ್ರಾಮೀಣ ಪತ್ರಕರ್ತರ ಸಮಸ್ಯೆ ಹಾಗೂ ಸಂಕಷ್ಟಗಳ ಬಗ್ಗೆ ವಿವರ ನೀಡಿದ ರಾಜ್ಯಾಧ್ಯಕ್ಷರಾದ ಜಿ. ಎಂ ರಾಜಶೇಖರ್ ರವರು ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ಭದ್ರತೆ ಹಾಗೂ ಸವಲತ್ತು ನೀಡುವಂತೆ ಮನವಿ ಮಾಡಿದರು. ಈ ಬಗ್ಗೆ ಮುಖ್ಯ ಮಂತ್ರಿಗಳ ಜೊತೆಗೆ ಕೂಡಾ ಮನವಿ ಮಾಡುವುದಾಗಿ ತಿಳಿಸಿದ ಸಂಘವು ಈ ಬಗ್ಗೆ ಗಮನ ನೀಡುವಂತೆ ಮನವಿ ಮಾಡಿದರು. ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘವು ರಾಜ್ಯದಾದ್ಯoತ ಮಾಧ್ಯಮ ವರದಿಗಾರರನ್ನು ಒಗ್ಗೂಡಿಸಿ ಅವರ ಭದ್ರತೆಗಾಗಿ ಅವಿರತ ಶ್ರಮ ವಹಿಸುತ್ತಿದೆ.

ವರದಿ: ರಾಜು ಅರಸಿಕೆರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!