Ad imageAd image

ರಾಯಚೂರು ನಗರದಲ್ಲಿ ಪಶುಗಳ ದಾಳಿಗೆ ಬೇಸತ್ತು ಜೀವ ಭಯದಿಂದ ತಿರಗಾಡುವ ಶಾಲಾ ಮಕ್ಕಳು ಮತ್ತು ಪೋಷಕರು

Bharath Vaibhav
ರಾಯಚೂರು ನಗರದಲ್ಲಿ ಪಶುಗಳ ದಾಳಿಗೆ ಬೇಸತ್ತು ಜೀವ ಭಯದಿಂದ ತಿರಗಾಡುವ ಶಾಲಾ ಮಕ್ಕಳು ಮತ್ತು ಪೋಷಕರು
WhatsApp Group Join Now
Telegram Group Join Now

ರಾಯಚೂರು : ನಗರದ ಮಕ್ತಲ್ ಪೇಟ್ ವಾರ್ಡ್ ನಂಬರ್ 25 ರಲ್ಲಿ ಸುಮಾರು ದಿನಗಳಿಂದ ಪಶುಗಳ ದಾಳಿಗೆ ಬೇಸತ್ತು ಜೀವ ಭಯದಿಂದ ತಿರಗಾಡುವ ಶಾಲಾ ಮಕ್ಕಳು ಮತ್ತು ಪೋಷಕರು

ರಾಯಚೂರು ನಗರದ ಮಿಲ್ಟನ್ ಸ್ಕೂಲ್ ಮತ್ತು ಸರ್ವೋದಯ ಸ್ಕೂಲ್ ಸುತ್ತ ಮುತ್ತ ಒಂದು ಆಕಳು ಸಂಚರಿಸುತ್ತಾ ಶಾಲೆಗೆ ಹೋಗುವ ಚಿಕ್ಕ ಚಿಕ್ಕ ಮಕ್ಕಳ ಮೇಲೆ ಆಕಳು ದಾಳಿ ಮಾಡುತ್ತದೆ ಮತ್ತು ಮಡ್ಡಿಪೇಟೆ ಹಾಗೂ ಲಕ್ಷ್ಮಮ್ಮ ಗುಡಿ ಕಲ್ಯಾಣ ಮಂಟಪ ರಸ್ತೆಯ ಮೇಲೆ ದ್ವಿಚಕ್ರ ವಾಹನ ಮೇಲೆ ಹೋಗುವವರೆಗೂ ಅಡ್ಡಗಟ್ಟಿ ದಾಳಿ ಮಾಡಿ ಗಾಯಗೊಳಿಸಿ ಸುಮಾರು ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಡಾವಣೆಯ ನಿವಾಸಿಗಳ ಮೇಲೆ ದಾಳಿ ಮಾಡುತ್ತದೆ ಇದರಿಂದ ಸ್ಥಳೀಯ ನಿವಾಸಿಗಳು ಭಯಭೀತಿಗೊಂಡಿದ್ದಾರೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹೆದರುತ್ತಾರೆ.

ಪುಟ್ಟ ಮಗು ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ ಮಗುವಿನ ಚಿರಾಟ ಕೇಳಿ ಮನೆಯಲ್ಲಿದ್ದ ತಂದೆ ಓಡಿಬಂದು ತನ್ನ ಮಗುವನ್ನು ರಕ್ಷಣೆ ಮಾಡಲು ಮುಂದಾದಾಗ ಅವರ ಮೇಲೆ ಕೂಡ ದಾಳಿ ನಡೆಸಿ ಗಾಯಗೊಳಿಸಿದೆ. ಮತ್ತು ದ್ವಿಚಕ್ರ ವಾಹನದ ಮೇಲೆ ತಂದೆ ಮಗು ರಸ್ತೆ ಮೇಲೆ ಹೋಗುವಾಗ ದ್ವಿಚಕ್ರ ವಾಹನ ಅಡ್ಡಗಟ್ಟಿ ಆಕಳು ದಾಳಿ ಮಾಡಿದನ್ನು ಸಿ ಸಿ ಟಿವಿ ಯಲ್ಲಿ ಸೆರೆ ಹಿಡಿಯಲಾಗಿದೆ ದಾಳಿ ಮಾಡುವುದನ್ನು ಗಮನಿಸಿ ಅಲ್ಲಿಯನ ಸ್ಥಳೀಯರು ತಂದೆ ಮಗುವನ್ನು ರಕ್ಷಣೆ ಮಾಡಿದ್ದಾರೆ.

ಸುಮಾರು ತಿಂಗಳ ಗಳಿಂದ ಅನೇಕರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ ಆಕಳು ದಾಳಿಯಿಂದ ಯಾವತ್ತಿನಲ್ಲಿ ಯಾರ ಜೀವ ಹೋಗುತ್ತದೆ ಗೊತ್ತಿಲ್ಲ ಸಾರ್ವಜನಿಕರ ಭಯ ಭೀತಿಗೊಂಡಿದ್ದಾರೆ. ಇದಕ್ಕೆಲ್ಲ ಮಹಾನಗರ ಪಾಲಿಕೆಯವರು ನಿರ್ಲಕ್ಷವೆ ಕಾರಣ ಸಾರ್ವಜನಿಕರು ಆಕಳು ದಾಳಿಯಿಂದ ಜೀವ ಹೋದರೆ ಅದಕ್ಕೆ ನೀವೇ ಜವಾಬ್ದಾರರು ಆದಕಾರಣ ಕೂಡಲೇ ಕೂಡಲೇ ಸ್ಪಂದಿಸಿ ಆಕಳನ್ನು ಸೆರೆಹಿಡಿದು ಗೋಶಾಲೆಗೆ ಒಪ್ಪಿಸಬೇಕೆಂದು ತಮ್ಮಲ್ಲಿ ಕಳಕಳ ವಿನಂತಿ. ಮಾನ್ಯ ಮಹಾನಗರ ಪಾಲಿಕೆ ಆಯುಕ್ತರಿಗೆ ರಾಯಚೂರು ಇವರಿಗೆ ಮನವಿ ಪತ್ರ ಸಲ್ಲಿಸಯಿತು.

ಈ ಸಂದರ್ಭದಲ್ಲಿ ಬಂಗಿ ಮುನಿರೆಡ್ಡಿ ಮಕ್ತಲ್ ಪೇಟ್ ನಿವಾಸಿ ಮತ್ತು ಜಿಲ್ಲಾಧ್ಯಕ್ಷ ಲೋಕ ಜನಶಕ್ತಿ ಪಕ್ಷ ಕಿ.ಸೆ ರಾಯಚೂರು ಮತ್ತು ಕಾನೂನು ಘಟಕ ಅಧ್ಯಕ್ಷರಾದ ಶೇಖರ್ ಗೌಡ ವಕೀಲರು ಹಾಗೂ ನರಸಪ್ಪ ಉಪಾಧ್ಯಕ್ಷರು ಮತ್ತು ಜಿತೇಂದ್ರ ಕುಮಾರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಇನ್ನು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು

ವರದಿ: ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!