ಚೆನ್ನೈ : ಮಣಿರತ್ನಂ ಅವರ ಐತಿಹಾಸಿಕ ಮಹಾಕಾವ್ಯ ಪೊನ್ನಿಯಿನ್ ಸೆಲ್ವನ್ – ಐ ಚಿತ್ರದ ಕೆಲಸಕ್ಕಾಗಿ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ನೀಡಲಾಗಿದೆ.
ಪೊನ್ನಿಯಿನ್ ಸೆಲ್ವನ್ – ಐ ಚಿತ್ರಕ್ಕಾಗಿ ತಮಿಳುನಾಡು ರಾಜ್ಯ ಸರ್ಕಾರದ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನ ಪಡೆದಿರುವುದು ಗೌರವದ ಸಂಗತಿ.ಈ ಮನ್ನಣೆಗಾಗಿ ತಮಿಳುನಾಡು ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ರೆಹಮಾನ್ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವ ಪೋಸ್ಟ್ ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.




