Ad imageAd image

ಪ್ರತಿಯೊಬ್ಬರು ಮನೆಯಲ್ಲಿ ಗೋವುಗಳನ್ನು ಸಾಕಬೇಕು: ಗುರುಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ

Bharath Vaibhav
ಪ್ರತಿಯೊಬ್ಬರು ಮನೆಯಲ್ಲಿ ಗೋವುಗಳನ್ನು ಸಾಕಬೇಕು:  ಗುರುಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ
WhatsApp Group Join Now
Telegram Group Join Now

ಹಿಂದೂ ಧರ್ಮದಲ್ಲಿ ಗೋವುಗಳನ್ನು ಗೋಮಾತೆ ಎಂದು ಗೌರವಿಸಿ ಪೂಜಿಸಲಾಗುತ್ತಿದೆ. ಅವುಗಳಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ಮನೆಯಲ್ಲಿ ಗೋವುಗಳನ್ನು ಸಾಕಬೇಕು ಎಂದು ಮಾಂಜರಿ-ಕೊಕಟನೂರ ಶ್ರೀ ಕಾಡಸಿದ್ದೇಶ್ವರ ಮಠದ ಷ.ಬ್ರ. ಗುರುಶಾಂತಲಿಂಗ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ನುಡಿದರು.

ಅವರು ಶನಿವಾರ ಸಮೀಪದ ಸಿಂಧೂರ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಾಲಯದ ನೂತನ ಕಟ್ಟಡ ಕಳಸಾರೋಹಣ ಹಾಗೂ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಕೋಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಶಿವಪೂರದ ಶ್ರೀ ಶಿವಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ೧೦೮ ಗೋವುಗಳ ಮಹಾಪೂಜೆ ಹಾಗೂ ಶಿವಲಿಂಗಕ್ಕೆ ರುದ್ರಭಿಷೇಕ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಗೋ ಮಾತೆಯನ್ನು ಲಕ್ಷ್ಮೀ ದೇವಿ ಎಂದು ಪರಿಗಣಿಸಲಾಗುತ್ತಿದೆ. ಹಸುಗಳು ಮನೆಯಲ್ಲಿ ವಾಸವಾಗಿದದರೇ ಇಡೀ ಕುಟುಂಬವೇ ಆರೋಗ್ಯವಾಗಿರುತ್ತಾರೆ. ಗೋಮಾತೆಗಳ ಶಗಣಿ ಮತ್ತು ಮೂತ್ರ ವಿಸರ್ಜನೆ ಮಾಡಿದರೇ ಮಾಟ, ಮಂತ್ರ, ಪಿಶಾಚಿ, ವಾಸ್ತು ದೋಷಗಳು ದೂರವಾಗುತ್ತವೆ, ಆರ್ಥಿಕ ಸ್ಥಿರತೆ ಮತ್ತು ಅದೃಷ್ಠ ಒದಗಿ ಬರಲಿದೆ. ಗೋವುಗಳ ಸ್ಪರ್ಶ ಮತ್ತು ಸೇವೆ ಮಾನಸ್ಸಿಕ ಶಾಂತಿಯನ್ನು ನೀಡುತ್ತದೆ. ಗೋ ಮೂತ್ರ ಮತ್ತು ಶಗಣಿಯನ್ನು ಪವಿತ್ರವೆಂದು ಪರಿಗಣಿಸಿ ದಾರ್ಮಿಕ ವಿಧಗಳಲ್ಲಿ ಬಳಸಲಾಗುತ್ತದೆ. ಸಾವಯವ ಕೃಷಿ ಮಾಡಲು ಗೋಮಾತೆಯ ಮೂತ್ರ ಶಗಣಿ ಪೂರಕವಾಗಿದೆ. ಇಂದಿನ ಸಾವಯವ ಕೃಷಿಗೆ ಗೋ ಮಾತೆಗಳು ರೈತರ ಹೆಚ್ಚು ಗಮನ ಬೇಕಾಗಿದೆ ಎಂದರು.

ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ, ಶಿವಪೂರದ ಈ ಪವಿತ್ರ ಸ್ಥಳದಲ್ಲಿ ನಮ್ಮ ತಂದೆಯಯವರ ಶಾಸಕರ ಪ್ರದೇಶ ಅಭಿವೃದ್ದಿ ಯೋಜನೆಯಡಿಯಲ್ಲಿ ೧೦ ಲಕ್ಷ ರೂ, ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲು ಅನುದಾನ ನೀಡಲಾವುದು, ಮುಂದಿನ ಈ ಕಾರ್ಯಕ್ರಮಕ್ಕೆ ಅನ್ನದಾಸೋಹದ ಸೇವೆ ನೀಡಲಾಗುವುದು. ೧೦೮ ಗೋಮಾತೆಯರ ಪೂಜೆ ಮತ್ತು ರುದ್ರಭಿಷೇಕ ಮಾಡಿರುವುದು ಈ ಕಾರ್ಯ ಜಿಲ್ಲೆಯಲ್ಲಿ ಮಾದರಿಯಾಗಿದೆ. ಕೋಹಳ್ಲಿ ಗ್ರಾಮ ಗಡಿಯಲ್ಲಿರುವ ಗ್ರಾಮ ೧೯೯೫ ರಲ್ಲಿ ಮಹಾರಾಷ್ಟ್ರಕ್ಕೆ ಅಂದು ಘೋಷಣೆ ಮಾಡಿದ್ದರೂ, ಅಂದು ನಮ್ಮ ತಂದೆಯವರ ಪ್ರಯತ್ನದಿಂದ ಕರಿಮಸೂತಿ ಯಾತ ನೀರಾವರಿ ಮಾಡಿ ತಾಲೂಕಿನ ಪೂರ್ವಭಾಗದಲ್ಲಿ ನೀರನ್ನು ತರುವ ಮೂಲಕ ರೈತರ ಕಷ್ಟಕ್ಕೆ ನಿಂತಿದ್ದಾರೆ ಎಂದರು.

ಈ ವೇಳೆ ತಿಕ್ಕೋಟಾದ ಶಿವಬಸವ ಶಿವಾಚಾರ್ಯ, ತುಬಚಿಯ ಬಸಯ್ಯಾ ಸ್ವಾಮಿಗಳು, ಯಡೂರಿನ ಈಶ್ವರಾಧ್ಯ ಹಿರೇಮಠ, ಶಿವುಕುಮಾರ ಹಿರೇಮಠ, ಸಂಗಯ್ಯಾ ಪೂಜಾರಿ, ಅಣ್ಣಪ್ಪ ಬಿರಾದಾರ, ತುಕಾರಾಮ ದೇವಖಾತೆ, ಸದಾಶಿವ ಹರಪಾಳೆ, ನಿಜಲಿಂಗ ಬಡಕೆ, ಲಿಂಗರಾಜ ಮುಧೋಳ, ಸಂತೋಷ ಸಾವಡಕರ, ಶ್ರೀಕಾಂಥ ಆಲಗೂರ, ಸಹದೇವ ಸೂರ್ಯವಂಶಿ, ಅಪ್ಪಾಸಾಬ ಕೋಳಿ, ಶೇಖರ ಹಾಲಳ್ಳಿ, ಶಂಬುಲಿಂಗ ಬಡಕೆ, ಸಂಗಪ್ಪ ಡಂಬಳಿ, ಮೈಬೂಬ ಪಡಸಲಗಿ, ಬಿ. ಆರ್. ಪಾಟೀಲ, ಅಪ್ಪಾಸಾಬ ಕಾಡಗೊಂಡ, ಶಿವರಾಯ ಮಂಟೂರ, ಲಕ್ಷ್ಮಣ ಉಮರಾಣಿ, ಹಣಮಂತ ಗಬ್ಬೂರ ಸೇರಿದಂತೆ ಕೋಹಳ್ಳಿ, ಸಿಂಧೂರ, ಅಡಹಳ್ಳಟ್ಟಿ ಗ್ರಾಮಸ್ಥರು ಪಾಲ್ಗೊಂಡಿದ್ದರು. ಉಪನ್ಯಾಸಕ ಎಚ್. ಎ. ಮಗದುಮ್ಮ ಸ್ವಾಗತಿಸಿದರು. ಕರೆಪ್ಪ ಕೊಂತಿಕಾರ ವಂದಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!