ಸೇಡಂ: ತಾಲೂಕಿನ ಮೆದಕ್ ತಾಂಡದ ಯುವತಿ ರಾಧಿಕಾ ತಂದೆ ಗುಂಡನಾಯಕ ಎಂಬ ವಿದ್ಯಾರ್ಥಿನಿಯು ನಾಲ್ವರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾಬ್ಯಾಸ ಮಾಡುತ್ತಿರುವಾಗ ಹಿಂದಿ ಶಿಕ್ಷಕರಾದ ವಿನೋದ್ ಮತ್ತು ಮುಖ್ಯಗುರುಗಳಾದ ಗುರಪ್ಪ ಚಿಕ್ಕಬೆನ್ನೂರು ನಾಲ್ವರ ಇವರು ವಿದ್ಯಾರ್ಥಿನಿಗೆ ವಿದ್ಯಾಭ್ಯಾಸದಲ್ಲಿ ಅತಿಯಾದ ತೊಂದರೆ ಕೊಟ್ಟಿದ್ದಲ್ಲದೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ ಆದ ಕಾರಣ ವಿದ್ಯಾರ್ಥಿನಿ ರಾಧಿಕಾ ಅವರು ಎರಡು ಹಂತಸ್ತಿನ ಬಿಲ್ಡಿಂಗ್ ಮೇಲಿಂದ ಹಾರಿಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಯುವತಿಯನ್ನು ಕಲಬುರಗಿ ಅಪಘಾತ ಚಿಕಿತ್ಸಾ ಕೇಂದ್ರದಲ್ಲಿ ಅಡ್ಮಿಟ್ ಮಾಡಲಾಗಿದೆ ಸದ್ಯ ವಿದ್ಯಾರ್ಥಿನಿಯ ಕಾಲು ಮುರಿದಿದೆ ಎಂದು ಪೋಷಕರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಆರೋಪಿತರಾದ ಶಿಕ್ಷಕರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮುಂದೆ ಯಾವುದೇ ವಿದ್ಯಾರ್ಥಿನಿಗೆ ಈ ರೀತಿಯ ಪರಿಸ್ಥಿತಿ ಎದುರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




