Ad imageAd image

ಚಿಂಚಲಿ ಮಾಯಕ್ಕಾ ದೇವಿ ಜಾತ್ರೆ ಸಮಾರಂಭ ಪ್ರಾರಂಭ

Bharath Vaibhav
ಚಿಂಚಲಿ ಮಾಯಕ್ಕಾ ದೇವಿ ಜಾತ್ರೆ ಸಮಾರಂಭ ಪ್ರಾರಂಭ
WhatsApp Group Join Now
Telegram Group Join Now

ರಾಯಬಾಗ: ತಾಲೂಕಿನ ಚಿಂಚಲಿ ಮಾಯಕ್ಕಾ ದೇವಿ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ದಿನಾಂಕ ಫೆಬ್ರುವರಿ ಒಂದರಿಂದ ಪ್ರಾರಂಭವಾಗಿದೆ ದೇಶದ ಹಲವು ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬರಲು ಆರಂಭಿಸಿದ್ದಾರೆ.

ಇದೇ ತಿಂಗಳು ದಿನಾಂಕ ಒಂದರಿಂದ ಮಾಯಕ್ಕ ದೇವಿ ಜಾತ್ರೆ ಪ್ರಾರಂಭವಾಗಿದ್ದು ಪ್ರಾಚೀನ ಪರಂಪರೆಯಂತೆ ದೇವಿಯನ್ನು ನದಿಯಿಂದ ಪೂಜೆ ಪುರಸ್ಕಾರ ಊಡಿ ತುಂಬುವ ಕಾರ್ಯಕ್ರಮನ್ನೂ ಹಮ್ಮಿಕೊಂಡು ನಂತರ ತಾಯಿಯನ್ನು ಚಿಂಚಲಿ ದೇವಸ್ಥಾನಕ್ಕೆ ಬರಮಾಡಿಕೊಂಡು ಜಾತ್ರೆಯ ಸಮಾರಂಭ ಆರಂಭಗೊಂಡಿದೆ.

ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳು ಸಹಸ್ರಾರು ಸಂಖ್ಯೆಯಲ್ಲಿ ಆರಂಭಗೊಂಡಿದ್ದು ಜಾತ್ರೆಗೆ ಬರುವ ಭಕ್ತರಿಗೆ ನೀರಿನ ಕುಡಿಯುವ ವ್ಯವಸ್ಥೆ, ಮಹಾಪ್ರಸಾದ, ಪೊಲೀಸ್ ಪಡೆ, ಸಿಸಿ ಕ್ಯಾಮೆರಾ, ವ್ಯವಸ್ಥೆ ಎಲ್ಲ ಸಕಲ ಸೌಲಭ್ಯ ಸೌಲಭ್ಯಗಳನ್ನು ದೊರಕಿಸಿ ಕೊಡಲಾಗಿದೆ ಎಂದು ಚಿಂಚಲಿ ಸರ್ಕಾರರಾದ ಶ್ರೀ ಜಿತೇಂದ್ರ (ದಾದಾ) ಅವರು ನಮ್ಮ ವಾಹಿನಿಯೊಂದಿಗೆ ಮಾತನಾಡಿ ತಿಳಿಸಿದರು.

ಇನ್ನು ಜಾತ್ರೆಯ ಹಲವು ದೃಶ್ಯಗಳನ್ನು ನಮ್ಮ ವಾಹಿನಿಯ ಮುಖಾಂತರ ನಿಮಗೆ ತೋರಿಸುತ್ತಿದ್ದೇವೆ ನೋಡಿ.

ಇನ್ನು ಲಕ್ಷಾಂತರ ಸಂಖ್ಯೆಯಲ್ಲಿ ಬರುವ ಭಕ್ತರಿಗೆ ಜಾತ್ರೆಯಲ್ಲಿ ಯಾವುದೇ ತೊಂದರೆಯಾಗದಂತೆ ಕಮಿಟಿಯವರು ಹಾಗೂ ಜಿತೇಂದ್ರ ಜಾದವ್ (ದಾದಾ) ಅವರು ವ್ಯವಸ್ಥೆಯನ್ನು ಕಾಪಾಡಲಿದ್ದಾರೆ ತಾವುಗಳು ಸಹಸ್ರಾರು ಸಂಖ್ಯೆಯಲ್ಲಿ ಬಂದು ಮಾಯಕ್ಕಾ ದೇವಿಯ ಆಶೀರ್ವಾದ ಪಡೆದುಕೊಂಡು ತಮ್ಮ ಮನೆಗೆ ಸುರಕ್ಷಿತವಾಗಿ ಹೋಗಬೇಕೆಂದು ತಿಳಿಸಿದರು.

ವರದಿ: ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!