Ad imageAd image

ಕೇಂದ್ರದ ಬಜೆಟ್ ರೈತವಿರೋಧಿ: ಶಾಸಕ ವಿಜಯಾನಂದ್ ಕಾಶಪ್ಪನವರ ಟೀಕೆ

Bharath Vaibhav
ಕೇಂದ್ರದ ಬಜೆಟ್ ರೈತವಿರೋಧಿ: ಶಾಸಕ ವಿಜಯಾನಂದ್ ಕಾಶಪ್ಪನವರ ಟೀಕೆ
WhatsApp Group Join Now
Telegram Group Join Now

ಇಲಕಲ್ಲ : ಕೇಂದ್ರ ಸರ್ಕಾರ ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್‌ ರೈತರು, ಕಾರ್ಮಿಕರು ಹಾಗೂ ಸಾಮಾನ್ಯ ಜನರ ಆಶೋತ್ತರಗಳಿಗೆ ಸ್ಪಂದಿಸಿಲ್ಲ. ಇದು ಸಂಪೂರ್ಣವಾಗಿ ರೈತವಿರೋಧಿ ಮತ್ತು ಜನವಿರೋಧಿ ಬಜೆಟ್ ಆಗಿದೆ ಎಂದು ಕಾಶಪ್ಪನವರ್ ತೀವ್ರವಾಗಿ ಟೀಕಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಕ್ಷೇತ್ರವನ್ನು ಪ್ರತಿನಿಧಿಸಿ ಐದು ಬಾರಿ ಸಂಸದರಾಗಿದ್ದರೂ ಕೂಡ ಯಾವುದೇ ಮಹತ್ವದ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ನೀರಾವರಿ, ಕೃಷಿ, ಉದ್ಯೋಗ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಸೂಕ್ತ ಅನುದಾನ ನೀಡಲಾಗಿಲ್‌ಲ ಎಂದು ಆರೋಪಿಸಿದರು.

ರೈತರ ಬೆಳೆ ಬೆಂಬಲ ಬೆಲೆ ಹೆಚ್ಚಿಸುವುದು, ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ದರ ಒದಗಿಸುವುದು, ಸಾಲ ಮನ್ನಾ ಸೇರಿದಂತೆ ಮೂಲಭೂತ ಬೇಡಿಕೆಗಳನ್ನು ಬಜೆಟ್‌ನಲ್ಲಿ ನಿರ್ಲಕ್ಷಸಲಾಗಿದೆ. ಮಧ್ಯಮ ಹಾಗೂ ಬಡ ವರ್ಗದ ಜನರ ಬದುಕು ಸುಧಾರಿಸುವ ಯಾವುದೇ ಜನಪರ ಕಾರ್ಯಕ್ರಮಗಳು ಇಲ್ಲವೆಂದು ಅವರು ಹೇಳಿದರು.

ವರದಿ :ಶಿವಕುಮಾರ ಕೆಂಭಾವಿಹಿರೇಮಠ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!