Ad imageAd image

ಮಾದಿಗ ಜನಾಂಗವು ಭಾರತದಲ್ಲಿ ಬಹು ಸಂಖ್ಯಾತರಾಗಿದ್ದಾರೆ: ಆದಿ ಜಾಂಬವ ಮಠದ ಷಡಕ್ಷರ ಮಹಾಸ್ವಾಮೀಜಿ

Bharath Vaibhav
ಮಾದಿಗ ಜನಾಂಗವು ಭಾರತದಲ್ಲಿ ಬಹು ಸಂಖ್ಯಾತರಾಗಿದ್ದಾರೆ: ಆದಿ ಜಾಂಬವ ಮಠದ ಷಡಕ್ಷರ ಮಹಾಸ್ವಾಮೀಜಿ
WhatsApp Group Join Now
Telegram Group Join Now

ವಿಜಯಪುರ: ಕರ್ನಾಟಕ ಭಾರತೀ ಜನತಾ ಪಾರ್ಟಿ ಉಪಾಧ್ಯಕ್ಷರಾದ ಉಮೇಶ ಕಾರಜೋಳ ಅವರ ನೇತೃತ್ವದಲ್ಲಿ ಗೋವಾ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಮಹಾಶಿವಶರಣ ಶ್ರೀ ಮಾದಾರ ಚೆನ್ನಯ್ಯನ ವನವರ ಜಯಂತೋತ್ಸವ ಹಮ್ಮಿಕೊಳ್ಳಲಾಗಿತ್ತು.

ಇಡೀ ಭಾರತ ದೇಶದಲ್ಲಿ ಮಾದಿಗ ಜನಾಂಗದ ಬಹು ಸಂಖ್ಯಾತರಾಗಿದ್ದಾರೆ ಅವರ ಕುಲ ಗುರುಗಳಾದ ಶ್ರೀ ಮಹಾ ಶಿವಶರಣ ಮಾದರ ಚನ್ನಯ್ಯನವರ ಜಯಂತಿ ಹಾಗು ಜನಜಾಗೃತಿ ಸಮಾವೇಶವನ್ನು ಗೋವಾ ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದು ಶ್ರೀ ರಾಮ ಮಂದಿರ, ಮಂಗೂರ್ ಹಿಲ್, ವಾಸ್ಕೊ, ಗೋವಾದಲ್ಲಿ ಆಯೋಜಿಸಲಾಗಿತ್ತು. ಸುಮಂಗಲೆಯರು ೧೦೧ ಕುಂಭಮೇಳ ಸಮೇತ ಹಾಗು ಸಾವಿರಾರು ಜನರ ಬೃಹತ್ ಸಂಖ್ಯೆಯಲ್ಲಿ ಮೆರವಣಿಗೆ ಮೂಲಕ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಹನಮಂತ ನರಸಲಗಿ ಮಾಜಿ ಸೈನಿಕರು ವಹಿಸಿಕೊಂಡಿದ್ದರು. ಶ್ರೀ ಷಡಕ್ಷರ ಮುನಿ ಸ್ವಾಮೀಜಿ ಶ್ರೀ ಆದಿ ಜಾಂಬವ ಮಹಾಸಂಸ್ಥಾನ ಮಠ ಹಿರಿಯೂರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾದಿಗ ಜನಾಂಗವು ಸಾಂಸ್ಕೃತಿಕವಾಗಿ ಬಹಳ ಶ್ರೀಮಂತವಾದ ಜನಾಂಗವಾಗಿದ್ದು ಈ ಜನಾಂಗದ ಇತಿಹಾಸವು ಸಿಂಧೂ ನಾಗರಿಕತೆ ಯೊಂದಿಗೆ ಸಂಬಂಧ ಹೊಂದಿದೆ . ಈ ಜನಾಂಗವು ಹಲವು ಸಂತ ಮಹಾತ್ಮರನ್ನು ಸಮಾಜಕ್ಕೆ ನೀಡಿದೆ. ಮಾದಿಗ ಜನಾಂಗವು ಸು ಸಂಸ್ಕೃತ ಜನಾಂಗವಾಗಿದ್ದು ಸಮಾಜದ ಒಗ್ಗಗಟ್ಟಿನ ಕೊರತೆಯಿಂದಾಗಿ ಈ ಜನಾಂಗದ ಇತಿಹಾಸವು ಮರೆಮಾಚಲಾಗಿದೆ. ಈ ಜನಾಂಗದ ಸಂಘಟ ಮತ್ತು ಶಿಕ್ಷಣವನ್ನು ಹೊಂದಬೇಕು ಪ್ರತಿಯೊಬ್ಬ ಮಾದಿಗ ಜನಾಂಗದವರು ಜನಾಂಗದ ಇತಿಹಾಸವನ್ನು ತಿಳಿದು ಅಭಿವೃದ್ಧಿಗಾಗಿ ಪಣತೊಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಶ್ರೀಶೈಲ ರತ್ನಾಕರ ಜಿಲ್ಲಾಧ್ಯಕ್ಷರು – ಕರ್ನಾಟಕ ಮಾದಿಗ ಸಂಘ, ವಿಜಯಪುರ ಮಾತನಾಡುತ್ತಾ ಮಾದಿಗ ಜನಾಂಗವು ಸಂಘಟನೆಯ ಕೊರತೆ ಇದೆ. ಈ ಜನಾಂಗವು ಶಿಕ್ಷಣ ಮತ್ತು ಆರ್ಥಿಕತೆಯಿಂದ ತುಂಬಾ ಹಿಂದುಳಿದ ಜನಾಂಗವಾಗಿದೆ ಈ ಜನಾಂಗಕ್ಕೆ ಒಬ್ಬ ಭರವಸೆ ನಾಯಕರಾದ ಉಮೇಶ ಕಾರಜೋಳ ಇರುವದರಿಂದ ಈ ಜನಾಂಗವು ಮುಂದಿನ ದಿನಮಾನಗಳಲ್ಲಿ ಸಂಘಟನಾತ್ಮಕವಾಗಿ ಅತಿ ಹೆಚ್ಚು ಕ್ರಿಯಾಶೀಲವಾಗಿ ಇರುತ್ತದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಕೃಷ್ಣ (ದಾಜಿ) ಸಾಳಕರ ಶಾಸಕರು – ವಾಸ್ಕೊ-ದ-ಗಾಮಾ ಮತಕ್ಷೇತ್ರ ಶ್ರೀ ಸಂಕಲ್ಸ್ ಅಮೋಣಕರ ಶಾಸಕರು – ಮುರಗಾಂವ ಮತಕ್ಷೇತ್ರ ಶ್ರೀ ದ್ಯಾಮಣ್ಣ ಎಸ್. ಹರಿಜನ (ಎಸ್.ಸಿ. ಅಧ್ಯಕ್ಷರು – ಭಾ.ಜ.ಪಾ. ವಾಸ್ಕೊ ಘಟಕ) ಹಾಗು ಶ್ರೀ ಬಸವರಾಜ ಗೌಡರ ಅಧ್ಯಕ್ಷರು – ಕರ್ನಾಟಕ ರಕ್ಷಣಾ ವೇದಿಕೆ, ಗೋವಾ ರಾಜ್ಯ ಮತ್ತು
ಯುವ ಮುಖಂಡರುಗಳು ಶ್ರೀ ಯಶವಂತ ಕಿಂಗ್ (ಸಡಾ ಘಟಕ) ಶ್ರೀ ರಾಜು ಹರಿಜನ (ನಿವ್ನಾಡೆಮ್ ಘಟಕ) ಶ್ರೀ ಮುದ್ದಪ್ಪ ಎಲ್. ಮಾದರ (ಕಾಳಗಿ) (ಬೈನಾ ಘಟಕ) ಶ್ರೀ ಹೆಬ್ಬಾಳಪ್ಪ ಹೆರಕಲ್ (ಬಿರ್ಲಾ ಘಟಕ) ಮಹಾಂತೇಶ ನರಸಲಗಿ ರಾಜು ಹರಿಜನ
ಸಮಾಜದ ಹಿರಿಯ ಸದಸ್ಯರು ಶ್ರೀ ಧರ್ಮಣ್ಣ ಡಿ. ಹಳ್ಳೂರ ಮಗೂರ ಹಿಲ್ ಶ್ರೀ ಯಲ್ಲಪ್ಪ ಎಂ. ಬೋರಿ ಗಾಂಧಿನಗರ ವಾಸ್ಕೊ ಹಲವು ನಾಯಕರು ಗಣ್ಯರು ಉಪಸ್ಥಿತರಿದ್ದರು ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀಮತಿ ಶೀಲಾ ಮೆಸ್ತ ವಹಿಸಿಕೊಂಡಿದ್ದರು.

ವರದಿ : ಸಾಯಬಣ್ಣ ಮಾದರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!