Ad imageAd image

ಕೃಷ್ಣಾ ನದಿ ತೀರದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಕಾರ್ಯ

Bharath Vaibhav
ಕೃಷ್ಣಾ ನದಿ ತೀರದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಕಾರ್ಯ
WhatsApp Group Join Now
Telegram Group Join Now

ಆಲಮಟ್ಟಿ:ಚಂದ್ರಗಿರಿ ಬಳಿ ಕೃಷ್ಣಾ ನದಿ ತೀರದಲ್ಲಿ ವಿಜಯಪುರದ ಗಾನಯೋಗಿ ಸಂಘದವರು ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ನದಿ ಸಂರಕ್ಷಣೆ ಹಾಗೂ ಪರಿಸರ ರಕ್ಷಣೆಯ ಮಹತ್ವವನ್ನು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ನದಿ ತೀರದಲ್ಲಿ ಸಂಗ್ರಹವಾಗಿದ್ದ ಬಟ್ಟೆ, ಪ್ಲಾಸ್ಟಿಕ್ ತ್ಯಾಜ್ಯ, ಕಸಕಡ್ಡಿ ಹಾಗೂ ಅಶುಚಿತ್ವವನ್ನು ಸ್ವಯಂಸೇವಕರ ಸಹಕಾರದಿಂದ ತೆರವುಗೊಳಿಸಲಾಯಿತು. ಸ್ಥಳೀಯ ಯುವಕರು, ಪರಿಸರ ಆಸಕ್ತ ನಾಗರಿಕರು ಹಾಗೂ ಗಾನಯೋಗಿ ಸಂಘದ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡು ಶ್ರಮದಾನ ಮಾಡಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಭಕ್ತರು ಹಾಗೂ ಸಾರ್ವಜನಿಕರಿಗೆ ಪವಿತ್ರ ನದಿಗಳ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂಬ ಸಂದೇಶ ನೀಡಲಾಯಿತು. ನದಿಯಲ್ಲಿ ಕಸ ಹಾಕದೇ ಪರಿಸರ ಸ್ನೇಹಿ ನಡೆಗಳನ್ನು ಅನುಸರಿಸಬೇಕು ಎಂದು ವಿನಂತಿಸಿದರು.
ಗಾನಯೋಗಿ ಸಂಘದ ಈ ಸೇವಾ ಕಾರ್ಯಕ್ಕೆ ಸ್ಥಳೀಯರಿಂದ ಉತ್ತಮ ಬೆಂಬಲ ಲಭಿಸಿತು. ಇಂತಹ ಪರಿಸರ ಸಂರಕ್ಷಣಾ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿಸಮಾಜದ ಜಾಲತಾಣದ ಪ್ರಖ್ಯಾತಿ ಪ್ರಕಾಶ್ ಆರ್ ಕೆ, ರವಿ.ಸಂತೋಷ್. ಹೇಮಂತ ಕಿರಣ. ಸಚಿನ್.
ಮಹೇಶ್. ಹೇಮಂತ್.ರಾಜಕುಮಾರ. ವೀರೇಶ್. ವಿಠಲ. ವಿಕಾಸ್. ಸಂದೀಪ್. ಪ್ರದೀಪ್. ಮಂಜುನಾಥ. ಹರೀಶ್. ಡಿಜೆ ಸಾಗರ್, ವಿಶ್ವಜಿತ್. ಕಿರಣ್ ಜತ್ತಿ. ಬಾಹುಬಲಿ ಇನ್ನಿತರರು ಉಪಸ್ಥಿತರಿದ್ದರು.
ವರದಿ;ಕೃಷ್ಣ ಎಚ್ ರಾಠೋಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!