Ad imageAd image

ವಿಜಯಪುರದಲ್ಲಿ ಭೀಕರ ಅಗ್ನಿ ಅವಘಡ : 20ಕ್ಕೂ ಹೆಚ್ಚು ಕಾರು ಸುಟ್ಟು ಭಸ್ಮ 

Bharath Vaibhav
ವಿಜಯಪುರದಲ್ಲಿ ಭೀಕರ ಅಗ್ನಿ ಅವಘಡ : 20ಕ್ಕೂ ಹೆಚ್ಚು ಕಾರು ಸುಟ್ಟು ಭಸ್ಮ 
WhatsApp Group Join Now
Telegram Group Join Now

ವಿಜಯಪುರ : ವಿಜಯಪುರದ HMK ಕಾರು ಸರ್ವಿಸ್ ಸೆಂಟರ್ ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 50 ರಲ್ಲಿರುವ ಕಾರು ಸರ್ವಿಸ್ ಸೆಂಟರ್ ನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಹನುಮಂತ ಕನವಡಿ ಎಂಬವರಿಗೆ ಸೇರಿದ ಕಾರು ಸರ್ವಿಸ್ ಸೆಂಟರ್ ನಲ್ಲಿ ಈ ಘಟನೆ ನಡೆದಿದೆ..

ಕಾರು ಸರ್ವಿಸ್ ಸೆಂಟರ್ ಗೆ ರಿಪೇರಿ ಮತ್ತು ಸರ್ವಿಸ್ಗಾಗಿ ಬಂದಿದ್ದು, ಸುಮಾರು 20 ಕಾರುಗಳು ಸುಟ್ಟು ಭಸ್ಮವಾಗಿದ್ದು 1 ಕೋಟಿಗೂ ಅಧಿಕ ನಷ್ಟವಾಗಿದೆ.

ಅಗ್ನಿ ದುರಂತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಅಂಗಡಿಯಲ್ಲಿದ್ದ 35 ಲಕ್ಷ ಮೌಲ್ಯದ ಕಾರಿನ ಬಿಡಿ ಭಾಗಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ. ಘಟನೆ ಕುರಿತಂತೆ ವಿಜಯಪುರದ ಗೋಲಗುಂಬಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!