ಬೆಳಗಾವಿ : ಬೆಳಗಾವಿಯ ಚಿಂಚಲಿ ಮಾಯಕ್ಕ ದೇವಿ ದರ್ಶನಕ್ಕೆ ದಂಪತಿಗಳು ಆಕ್ಸಿಜನ್ ಸಿಲೆಂಡರ್ ಸಮೇತ ಬಂದು ಮಾಯಕ್ಕ ದೇವಿಯ ದರ್ಶನ ಪಡೆದ ಘಟನೆ ಇಂದು ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ನಾಯಕ ದೇವಸ್ಥಾನಕ್ಕೆ ಪಂಡರಾಪುರದ ದಂಪತಿಗಳು ಆಗಮಿಸಿ ದೇವಿ ದರ್ಶನ ಪಡೆದಿದ್ದಾರೆ.
ಪತ್ನಿಗಾಗಿ ಕೈಯಲ್ಲಿ ಆಕ್ಸಿಜನ್ ಹಿಡಿದುಕೊಂಡು ಪತಿ ಹೆಜ್ಜೆ ಹಾಕಿದ್ದಾರೆ. ಮಹಿಳೆಯು ಅನಾರೋಗ್ಯದಿಂದ ಬಳಲುತ್ತಿದ್ದು ದೇವರು ಒಳಿತು ಮಾಡಲಿ ಎಂದು ಬೇಡಿಕೊಂಡಿದ್ದಾರೆ. ಕಳೆದ 18 ವರ್ಷಗಳಿಂದ ನಿರಂತರವಾಗಿ ದೇವರ ದರ್ಶನ ಮಾಡುತಿದ್ದೇವೆ. ಇಂದು ಸಹ ಮಾಯಕ್ಕ ದೇವಿ ದರ್ಶನ ಚೆನ್ನಾಗಿ ಆಗಿದೆ ಎಂದು ದಂಪತಿ ಹೇಳಿದ್ದಾರೆ.




