Ad imageAd image

ಬರೋಬ್ಬರಿ 15 ದಿನದಲ್ಲಿ ದೆಹಲಿಯಲ್ಲಿ 800 ಕ್ಕೂ ಹೆಚ್ಚು ಮಹಿಳೆಯರು ನಾಪತ್ತೆ

Bharath Vaibhav
ಬರೋಬ್ಬರಿ 15 ದಿನದಲ್ಲಿ ದೆಹಲಿಯಲ್ಲಿ 800 ಕ್ಕೂ ಹೆಚ್ಚು ಮಹಿಳೆಯರು ನಾಪತ್ತೆ
WhatsApp Group Join Now
Telegram Group Join Now

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮಿಸ್ಸಿಂಗ್ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ.

2026ರ ವರ್ಷದ ಮೊದಲ 15 ದಿನಗಳಲ್ಲಿ (ಜನವರಿ 1 ರಿಂದ 15 ರವರೆಗೆ) ಬರೋಬ್ಬರಿ 800ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ದೆಹಲಿ ಪೊಲೀಸರು ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.

ಅಂದರೆ, ಸರಾಸರಿ ದಿನಕ್ಕೆ 54 ಮಂದಿ ನಾಪತ್ತೆಯಾಗುತ್ತಿದ್ದಾರೆ. ಇವರಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ನಾಪತ್ತೆಯಾದ 800 ಮಂದಿಯಲ್ಲಿ 509 ಮಹಿಳೆಯರು ಮತ್ತು 298 ಪುರುಷರು ಇದ್ದಾರೆ.

ಪೊಲೀಸ್ ದಾಖಲೆಗಳ ಪ್ರಕಾರ, ಈ 15 ದಿನಗಳಲ್ಲಿ 191 ಅಪ್ರಾಪ್ತರು ನಾಪತ್ತೆಯಾಗಿದ್ದಾರೆ. ಅಂದರೆ ಪ್ರತಿ ದಿನ ಸರಾಸರಿ 13 ಮಕ್ಕಳು ಮಾಯವಾಗುತ್ತಿದ್ದಾರೆ. ನಾಪತ್ತೆಯಾದ ಅಪ್ರಾಪ್ತರಲ್ಲಿ 146 ಮಂದಿ ಹೆಣ್ಣು ಮಕ್ಕಳೇ ಆಗಿರುವುದು ಗಮನಾರ್ಹ. ಇವರಲ್ಲಿ 12 ರಿಂದ 18 ವರ್ಷದೊಳಗಿನ ಹದಿಹರೆಯದವರು 169 ಮಂದಿ ಇದ್ದಾರೆ.

ಪೊಲೀಸರು ಈವರೆಗೆ ಕೆಲವರನ್ನು ಪತ್ತೆಹಚ್ಚಿದ್ದರೂ, ಸುಮಾರು 71 ಪ್ರತಿಶತ ಹದಿಹರೆಯದವರ ಸುಳಿವು ಇನ್ನೂ ಸಿಕ್ಕಿಲ್ಲ. ವಿಶೇಷವಾಗಿ 8 ವರ್ಷದೊಳಗಿನ ಚಿಕ್ಕ ಮಕ್ಕಳು ಸಹ ನಾಪತ್ತೆಯಾಗುತ್ತಿರುವುದು ಪೋಷಕರಲ್ಲಿ ನಿದ್ದೆಗೆಡಿಸಿದೆ.

ದೊಡ್ಡವರ ಸಂಖ್ಯೆಯೂ ಕಡಿಮೆಯಿಲ್ಲ: ಜನವರಿ ಮೊದಲ ಹದಿನೈದು ದಿನಗಳಲ್ಲಿ 616 ವಯಸ್ಕರು ನಾಪತ್ತೆಯಾಗಿದ್ದಾರೆ. ಇವರಲ್ಲಿ 363 ಮಹಿಳೆಯರು ಮತ್ತು 253 ಪುರುಷರು ಸೇರಿದ್ದಾರೆ. ಪೊಲೀಸರು ಕಾರ್ಯಾಚರಣೆ ನಡೆಸಿ ಹುಡುಕಾಟ ನಡೆಸುತ್ತಿದ್ದರೂ, ಈವರೆಗೆ ಕೇವಲ 181 ವಯಸ್ಕರ ಸುಳಿವು ಮಾತ್ರ ಸಿಕ್ಕಿದೆ.

ಉಳಿದ 435 ಮಂದಿ ಎಲ್ಲಿಗೆ ಹೋದರು? ಅವರನ್ನು ಯಾರಾದರೂ ಅಪಹರಿಸಿದ್ದಾರೆಯೇ? ಅಥವಾ ಇದರ ಹಿಂದೆ ಯಾವುದಾದರೂ ಗ್ಯಾಂಗ್ ಕೆಲಸ ಮಾಡುತ್ತಿದೆಯೇ? ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದೆಹಲಿ ಪೊಲೀಸರು ಕೈಗೊಂಡಿರುವ ಕ್ರಮಗಳು

ಆಪರೇಷನ್ ಮಿಲಾಪ್ (Operation Milap): ನಾಪತ್ತೆಯಾದ ಮತ್ತು ಅಪಹರಣಕ್ಕೊಳಗಾದ ಮಕ್ಕಳನ್ನು ಪತ್ತೆಹಚ್ಚಲು ದೆಹಲಿ ಪೊಲೀಸರು ಈ ವಿಶೇಷ ಅಭಿಯಾನವನ್ನು ನಡೆಸುತ್ತಿದ್ದಾರೆ.

ಜನವರಿ 2026ರಲ್ಲಿ ಈ ಕಾರ್ಯಾಚರಣೆಯ ಮೂಲಕ ನೂರಾರು ಮಕ್ಕಳನ್ನು ಪತ್ತೆಹಚ್ಚಿ ಅವರ ಕುಟುಂಬಗಳೊಂದಿಗೆ ಸೇರಿಸಲಾಗಿದೆ. ನಾಪತ್ತೆ ದೂರು ದಾಖಲಾದ ತಕ್ಷಣ, ಸ್ಥಳೀಯ ಪೊಲೀಸರು ಸಕ್ರಿಯರಾಗಿ ಹತ್ತಿರದ ಮೆಟ್ರೋ ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ.

CCTV ಮತ್ತು ತಂತ್ರಜ್ಞಾನದ ಬಳಕೆ: ನಾಪತ್ತೆಯಾದವರು ಕೊನೆಯದಾಗಿ ಕಂಡುಬಂದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೆ, ಫೋನ್ ಲೊಕೇಶನ್ ಟ್ರ್ಯಾಕಿಂಗ್ ಮೂಲಕ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.

ಪೊಲೀಸರ ಸ್ಪಷ್ಟನೆ: ಈ ನಡುವೆ ದೆಹಲಿ ಪೊಲೀಸರು ಒಂದು ಅಧಿಕೃತ ಹೇಳಿಕೆಯನ್ನು ನೀಡಿದ್ದು, “ಜನವರಿಯಲ್ಲಿ ಈ ಸಂಖ್ಯೆ ಹೆಚ್ಚಾದಂತೆ ಕಂಡರೂ, ದೆಹಲಿಯ ಜನಸಂಖ್ಯೆಗೆ ಹೋಲಿಸಿದರೆ ಇದು ಮಾಮೂಲಿ ಪ್ರಮಾಣದಲ್ಲಿದೆ” ಎಂದು ತಿಳಿಸಿದ್ದಾರೆ. ಪ್ರತಿ ತಿಂಗಳು ಸರಾಸರಿ 2,000 ಪ್ರಕರಣಗಳು ದಾಖಲಾಗುತ್ತವೆ ಎಂದು ಅವರು ಹೇಳಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!