Ad imageAd image

ಮಹಿಳಾ ಅಧಿಕಾರಿಗೆ ಬ್ಲ್ಯಾಕ್ ಮೇಲ್ ಪ್ರಕರಣ : ಕಿಂಗ್ ಫಿನ್ ಸರ್ಕಾರಿ ಅಧಿಕಾರಿ ಅರೆಸ್ಟ್ 

Bharath Vaibhav
ಮಹಿಳಾ ಅಧಿಕಾರಿಗೆ ಬ್ಲ್ಯಾಕ್ ಮೇಲ್ ಪ್ರಕರಣ : ಕಿಂಗ್ ಫಿನ್ ಸರ್ಕಾರಿ ಅಧಿಕಾರಿ ಅರೆಸ್ಟ್ 
WhatsApp Group Join Now
Telegram Group Join Now

ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿಯ ಮನೆಯಲ್ಲಿ ಬಲ್ಬ್ ಹೋಲ್ಡರ್‌ನಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿದ್ದ ಪ್ರಕರಣಕ್ಕೆ ಸಂಭಂದಿಸಿದಂತೆ ಮುಖ್ಯ ಆರೋಪಿಯಾಗಿರುವ ಸರ್ಕಾರಿ ಅಧಿಕಾರಿಯನ್ನು ಬಂಧಿಸಲಾಗಿದೆ.

ಬೆಳಗಾವಿ ಮಾಳಮಾರುತಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ, ಬಂಧಿತನನ್ನು ವಿನೋದ್ ಟಿ ಎಂದು ಗುರುತಿಸಲಾಗಿದೆ.

ಈತ ವೃತ್ತಿಯಲ್ಲಿ ಸರ್ಕಾರಿ ಅಧಿಕಾರಿಯಾಗಿದ್ದುಕೊಂಡು ಮಹಿಳಾ ಅಧಿಕಾರಿಯ ಮನೆಯಲ್ಲಿ ರಹಸ್ಯ ಕ್ಯಾಮರಾ ಅಳವಡಿಕೆಗೆ ಕುಮ್ಮಕ್ಕು ನೀಡಿ ಕೃತ್ಯವೆಸಗಿದ್ದ ಎಂಬುದು ವಿಚಾರಣೆಯಲ್ಲಿ ಬಯಲಾಗಿದೆ.

ವೃತ್ತಿ ವೈಷಮ್ಯದಿಂದ ಈ ಕೃತ್ಯ ಎಸಗಿದ್ದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ. ಮಹಿಳಾ ಅಧಿಕಾರಿ ಆರೋಪಿ ವಿನೋದ್ ವರ್ಗಾವಣೆಗೆ ಕಾರಣರಾಗಿದ್ದರಂತೆ. ಇದೇ ವೈಷಮ್ಯದಿಂದ ಸೇಡು ತೀರಿಸಿಕೊಳ್ಳಲು ಅವರ ಮನೆಯಲ್ಲಿ ಬಲ್ಬ್ ಹೋಲ್ಡರ್ ನಲ್ಲಿ ಕ್ಯಾಮರಾ ಇಡುವ ಕೃತ್ಯವೆಸಗಿದ್ದ.

ಸದ್ಯ ಆರೋಪಿ ಬಳಿಇರುವ ಮೊಬೈಲ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಿಳಾ ಅಧಿಕಾರಿಯ ವಿರುದ್ಧ ನಕಲಿ ಪತ್ರಕರ್ತರನ್ನು ಬಳಸಿ ಬ್ಲಾಕ್‌ಮೇಲ್ ಮಾಡುವ ಯತ್ನ ನಡೆಸಿದ್ದ. ಅದರಿಂದ ಬಂದ ಹಣದಲ್ಲಿ ನಕಲಿ ಪತ್ರಕರ್ತರು ಹಾಗೂ ವಿನೋದ್ ಇಬ್ಬರಿಗೂ ಪಾಲು ಇತ್ತು ಎನ್ನಲಾಗಿದೆ.

ಮಹಿಳಾ ಅಧಿಕಾರಿಯ ಖಾಸಗಿ ದೃಶ್ಯಗಳನ್ನು ಸಂಗ್ರಹಿಸಲು ಅವರ ಮನೆ ಬಲ್ಬ್ ಹೋಲ್ಡರ್‌ಗಳಲ್ಲಿ ಒಟ್ಟು 8 ರಹಸ್ಯ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ರಹಸ್ಯ ಕ್ಯಾಮರಾ ಮೂಲಕ ವೀಡಿಯೊ ಸಂಗ್ರಹಿಸಿ ಬ್ಲ್ಯಾಕ್ ಮೇಲ್ ಮಾಡುವ ನೀಚ ಸ್ಕೆಚ್ ಹಾಕಿದ್ದ ಆರೋಪಿ. ಪ್ರಕರಣ ಸಂಬಂಧ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಇದೀಗ ಮಹಿಳಾ ಅಧಿಕಾರಿಯ ಕಚೇರಿಯಲ್ಲಿದ್ದ ಮತ್ತೊಬ್ಬ ಅಧಿಕಾರಿಯನ್ನೂ ವಶಕ್ಕೆ ಪಡೆದಿದ್ದಾರೆ.

 

ಸದ್ಯ ಆರೋಪಿ ವಿನೋದ್ ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಜೈಲಿಗಟ್ಟಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!