ಸಿಂಧನೂರು : ತಾಲೂಕ ಆಡಳಿತ ಕಛೇರಿಯಲ್ಲಿ ಕಾಯಕ ಶರಣರ ಜಯಂತಿ ಆಚರಿಸಿ ನಿತ್ಯ ಜೀವನದಲ್ಲಿ ಕಾಯಕ ತತ್ವ ಅಳವಡಿಸಿಕೊಂಡಲ್ಲಿ ವೈಯಕ್ತಿಕ ಮತ್ತು ಸಮುದಾಯದ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹಿರಿಯ ಹೋರಾಟಗಾರ ಹೆಚ್. ಎನ್. ಬಡಿಗೇರ್ ಹೇಳಿದರು
ತಾಲೂಕ ಕಚೇರಿ ಸಭಾಂಗಣದಲ್ಲಿ ಫೆಬ್ರವರಿ 10, ಮಂಗಳವಾರ ಹಮ್ಮಿಕೊಂಡಿದ್ದ ಕಾಯಕ ಶರಣರಾದ ಮಾದರ ಚೆನ್ನಯ್ಯ. ಮಾದರ ದೂಳಯ್ಯ. ಡೋಹರ ಕಕ್ಕಯ್ಯ. ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿಯವರ ಜಯಂತಿ ಕಾರ್ಯಕ್ರಮದ ಪೂಜೆ ನೆರವೇರಿಸಿ ಮಾತನಾಡಿದ ಅವರು ಕಾಯಕ ಶರಣ ತತ್ವ ಸದಾ ಸ್ಮರಿಸುತ್ತಾ ಪ್ರತಿಯೊಬ್ಬರು ಕೌಶಲ್ಯಾಧಾರಿತ ಕಾಯಕದಲ್ಲಿ ತೊಡಿಸಿಕೊಳ್ಳುವಲ್ಲಿ ಜಾಗೃತಿ ವಹಿಸಬೇಕು ಎಂದರು
ಈ ಸಂದರ್ಭದಲ್ಲಿ: ಪಿಎಲ್‌ಡಿ, ಬ್ಯಾಂಕ್ ಅಧ್ಯಕ್ಷ ದೊಡ್ಡ ಬಸವರಾಜ. ಹಿರಿಯ ಹೋರಾಟಗಾರ ಎಚ್ಎನ್. ಬಡಿಗೇರ್. ನಿರುಪಾದೆಪ್ಪ ವಕೀಲರು ಗುಡಿಹಾಳ. ಕರೇಗೌಡ ಬಸವ ಕೇಂದ್ರ ಅಧ್ಯಕ್ಷರು. ದಲಿತ ಮುಖಂಡ ಮರಿಯಪ್ಪ ಬಿ ಎಸ್ ಪಿ. ಕಾಜಾ ಮಲ್ಲಿಕ್ ಸುಡ ಸದಸ್ಯರು. ಮೌನೇಶ್ ಜಾಲವಾಡಗಿ. ಇನ್ನು ಅನೇಕರು ಇದ್ದರು
ವರದಿ: ಬಸವರಾಜ ಬುಕ್ಕನಹಟ್ಟಿ




