Ad imageAd image

ಯುವಕರಿಗೆ ದುಶ್ಚಟ ಮಾಡಲು ಅನುಕೂಲವಾಯಿತಾ ಹೊಸ ಸರ್ಕಾರಿ ಆಸ್ಪತ್ರೆ

Bharath Vaibhav
ಯುವಕರಿಗೆ ದುಶ್ಚಟ ಮಾಡಲು ಅನುಕೂಲವಾಯಿತಾ ಹೊಸ ಸರ್ಕಾರಿ ಆಸ್ಪತ್ರೆ
WhatsApp Group Join Now
Telegram Group Join Now

ವಿಜಯಪುರ : ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಹೊಸನಗರದಲ್ಲಿ ನೂತನವಾಗಿ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡವಾಗಿದ್ದು ಕಟ್ಟಡ ಮುಗಿದು ಆರು ತಿಂಗಳು ಕಳೆದರು ಸಹಿತ ಇನ್ನೂವರೆಗೆ ಪ್ರಾರಂಭವಾಗಿಲ್ಲ. ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ್ ರವರಿಗೆ ಸುಮಾರು ಎರಡು ತಿಂಗಳ ಹಿಂದೆಯೇ ನಮ್ಮ ಕರ್ನಾಟಕ ಸೇನೆಯ ವತಿಯಿಂದ ಮನವಿ ನೀಡಲಾಗಿತ್ತು.ಈ ಮನವಿಗೆ ಇನ್ನುವರೆಗೂ ಸ್ಪಂದನೆ ಸಿಕ್ಕಿಲ್ಲ. ತಾಲೂಕಿನ ಸುತ್ತಮುತ್ತಲಿನ ಹಳ್ಳಿಯ ಜನರು ತುರ್ತು ಚಿಕಿತ್ಸೆಗೆ ಬಂದಾಗ ಅವರಿಗೆ ಸರಿಯಾದ ಚಿಕಿತ್ಸೆ ಸಿಗುವುದಿಲ್ಲ. ಕಾರಣ ಚಿಕಿತ್ಸೆಗೆ ಬೇಕಾಗಿರುವ ವಸ್ತುಗಳು, ಹಾಗೂ ವೈದ್ಯರ ಕೊರತೆ ಕೂಡಾ ಇದೆ, ಇಲ್ಲಿ ರಾಷ್ಟ್ರೀಯ ಹೆದ್ದಾರಿ ಕೂಡ ಇದೆ ಹಲವಾರು ಬಾರಿ ರಸ್ತೆ ಅಪಘಾತವಾದಾಗ ತುರ್ತು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಬಂದಾಗ ವೈದ್ಯರು ಹೇಳೋದು ವಂದೇ ಮಾತು,,, ನಮಗೆ ಚಿಕಿತ್ಸೆ ನೀಡೋಕಾಗಲ್ಲ ಯಾಕಂದ್ರೆ ನಮ್ಮತ್ರ ವೈದ್ಯರ ಕೊರತೆ ಇದೆ ಎಂದು ಹೇಳುತ್ತಾರೆ. , ದೇವರ ಹಿಪ್ಪರಗಿಯಿಂದ ವಿಜಯಪುರ ಸುಮಾರು 40 ಕಿಲೋಮೀಟರ್ ಇದೆ ಜಿಲ್ಲಾ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಎಷ್ಟೋ ಜನ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಈ ಹೊಸ ಆಸ್ಪತ್ರೆಯಲ್ಲಿ ಕೆಲವು ಕಿಡಿಗೇಡಿಗಳು ಆಸ್ಪತ್ರೆಯ ಗಾಜುಗಳನ್ನು ಒಡೆದಿದ್ದಾರೆ.. ಮತ್ತು ಆಸ್ಪತ್ರೆಯಲ್ಲಿ ಕುಳಿತು ಸಿಗರೇಟ್ ಸೇದುವುದು, ಗುಟ್ಕಾ ತಿಂದು ಉಗುಳುವುದು ಕಡಿಗೇಡಿಗಳು ಮಾಡುತಿದ್ದರೆ .. ನಮ್ಮ ಕರ್ನಾಟಕ ಸೇನೆ ವತಿಯಿಂದ ವಿನಂತಿ ಮಾಡಿಕೊಳ್ಳುವುದು ಏನೆಂದರೆ ಬೇಗ ಸರ್ಕಾರಿ ಆಸ್ಪತ್ರೆ ಪ್ರಾರಂಭಿಸಿ, ಬಡ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮತ್ತು ಮತಕ್ಷೇತ್ರದ ಶಾಸಕರಲ್ಲಿ ವಿನಂತಿಸಿದರು.. ಹೊಸ ಆಸ್ಪತ್ರೆಯೂ ಬೇಗ ಪ್ರಾರಂಭವಾಗದಿದ್ದರೆ ನಮ್ಮ ಕರ್ನಾಟಕ ಸೇನೆಯ ವತಿಯಿಂದ ಉಗ್ರವಾದ ಹೋರಾಟ ಮಾಡಲಾಗುವುದೆಂದು ಸೇನೆಯ ಅಧ್ಯಕ್ಷ ಹಸನ ನದಾಫ್ ಹಾಗೂ ಅಮೀದ ಮುಲ್ಲಾ ಅವರು ಹೇಳಿದರು . ಈ ಸಂದರ್ಭದಲ್ಲಿ ಚಿದಾನಂದ್ ಭಜಂತ್ರಿ, ಸಿದ್ದು ಕಾಟಕರ್, ಮಲ್ಲು ಬಿರಾದಾರ್, ಹಾಗೂ ಸಂಘಟನೆಯ ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!