ಬೆಂಗಳೂರು : ಒಂದೆಡೆ ಮುಂದುವರೆದ ನಾಯಕತ್ವ ಗೊಂದಲ, ಮತ್ತೊಂದೆಡೆ ಬಜೆಟ್ ಸಿದ್ಧತೆ, ಇದರ ನಡುವೆಯೇ ಆಡಳಿತ ಪಕ್ಷ ಕಾಂಗ್ರೆಸ್ನ ಸುಮಾರು 13ಕ್ಕೂ ಹೆಚ್ಚು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ವಿದೇಶ ಪ್ರವಾಸಕ್ಕೆ ಸಜ್ಜಾಗಿದ್ದಾರೆ.
ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ 13ಕ್ಕೂ ಹೆಚ್ಚು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಇದೇ 18ರಿಂದ ಮಾರ್ಚ್ 3ರವರೆಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದಾರೆ.ಸರ್ಕಾರದಿಂದ ನಿರಾಕ್ಷೇಪಣಾ ಪತ್ರ ಪಡೆದೇ ಪ್ರವಾಸಕ್ಕೆ ಹೊರಟಿದ್ದಾರೆ ಎಂದು ತಿಳಿದು ಬಂದಿದೆ.
ಪ್ರವಾಸಕ್ಕೆ ತೆರಳುತ್ತಿರುವ ಶಾಸಕರ ಪಟ್ಟಿ
ಪ್ರವಾಸಕ್ಕೆ ತೆರಳುತ್ತಿರುವ ಶಾಸಕರ ಪಟ್ಟಿಯಲ್ಲಿ ಎಚ್.ಡಿ.ತಮ್ಮಯ್ಯ, ಹಂಪನಗೌಡ ಬಾದರ್ಲಿ, ಬಿ.ದೇವೇಂದ್ರಪ್ಪ, ಯಶವಂತರಾಯಗೌಡ ಪಾಟೀಲ್, ರಘುಮೂರ್ತಿ, ಬಿ.ಎಂ.ನಾಗರಾಜ, ಜೆ.ಟಿ.ಪಾಟೀಲ್, ಅಲ್ಲಮಪ್ರಭು ಪಾಟೀಲ್, ಸಿ.ಪುಟ್ಟರಂಗಶೆಟ್ಟಿ, ಬಸನಗೌಡ ಬಾದರ್ಲಿ, ಎ.ಆರ್.ಕೃಷ್ಣಮೂರ್ತಿ, ಬಸನಗೌಡ ತುರುವಿಹಾಳ್, ಎನ್.ಎಚ್.ಕೋನರೆಡ್ಡಿ ಸೇರಿದಂತೆ ಸುಮಾರು 13 ಶಾಸಕರು, ಎಂಎಲ್ಸಿಗಳ ಹೆಸರು ಹರಿದಾಡುತ್ತಿದೆ. ಈ ಮಧ್ಯೆ, ಕೋನರೆಡ್ಡಿ ಅವರು ತಾವು ಪ್ರವಾಸಕ್ಕ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.




