ಸುರಪುರ:೧೨ ನೇಯ ಶತಮಾನದ ಶರಣರು ಕಾಯಕ ತತ್ವದ ಅಡಿಯಲ್ಲಿ ಸಮ ಸಮಾಜ ನಿರ್ಮಾಣಕ್ಕಾಗಿ ಹೋರಾಟ ಮಾಡಿದವರು ಜಾತಿರಹಿತ ಲಿಂಗರಹಿತ ಸಮಾಜಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡ ಶರಣರು ಈಗ ನಮ್ಮ ಮುಂದಿನ ಭವಿಷ್ಯದ ಮಾರ್ಗದರ್ಶಕರಾಗಿದ್ದಾರೆ ಎಂದು ನ್ಯಾಯವಾದಿಗಳಾದ ಯಲ್ಲಪ್ಪ ಹುಲ್ಕಲ್ ಅವರು ಹೇಳಿದರು.
ಪಟ್ಟಣದ ತಾಲೂಕು ಆಡಳಿತ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡ ಕಾಯಕ ಶರಣರಾದ ಮಾದರ ಚೆನ್ನಯ್ಯ, ಮಾದರ ದೊಳಯ, ಉರಿಲಿಂಗಪೆದ್ದಿ ,ಸಮಗಾರ ಹರಳಯ, ಡೋಹರ ಕಕ್ಕಯ್ಯ ಶರಣ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಸವ ಯುಗದಲ್ಲಿ ಕಾಯಕ ಶರಣರು ತಮ್ಮ ಅಮೂಲ್ಯವಾದಂತ ವಚನಗಳಿಂದ ಸಮಾಜದ ಅನುಕೂಲದ ಮಹಾಪುರುಷರಾಗಿದ್ದಾರೆ ಕಾಯಕ ಶರಣರು ಸಮಾಜದ ಮೂಢನಂಬಿಕೆ ಅಂದಚಾರ ಜಾತಿ ಪದ್ಧತಿ ವಿರುದ್ಧ ಧ್ವನಿ ಎತ್ತಿದವರು ಎಂತಹ ಮಹಾನ್ ಮಾನವತ್ವದಿಗಳು ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು ದಲಿತ ಮುಖಂಡರಾದ ಹಣಮಂತ ಬೊಮ್ಮನಹಳ್ಳಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಬಸವದಿ ಪ್ರಥಮರಲ್ಲಿ ದಲಿತ ಶರಣರು ಪ್ರಮುಖರಾಗಿ ಕಂಡು ಬರುತ್ತರೆ ಸಮಾಜದ ಜಾತಿ ವ್ಯವಸ್ಥೆ ವಿರುದ್ಧ ಪ್ರಬಲ ಧ್ವನಿಯಾಗಿ ಈ ಶರಣರ ತಮ್ಮ ವಚನಗಳ ಮೂಲಕ ಸಮಾಜದ ಮೂಢನಂಬಿಕೆ ವಿರುದ್ಧ ಪ್ರಬಲವಾದ ಹೋರಾಟ ರೂಪಿಸಿದರು ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದರು ಇಂದಿನ ಸಂವಿಧಾನವು ಬಸವ ಶರಣರ ಕನಸ್ಸಿನ ಪ್ರತಿರೂಪದಂತೆ ಮೂಡಿ ಬಂದಿದೆ ಎಂದರು. ಕುಂಠೀತಗೊಂಡಿರುವ ಈಗ ಈ ಸಮಾಜದಲ್ಲಿ ಕಾಯಕ ಶರಣರ ಅವರ ಕೆಲಸದ ಶ್ರದ್ಧೆ ನಿಷ್ಠೆಯನ್ನು ನಾವು ಅಳವಡಿಸಿಕೊಂಡು ನಾವು ಕಾಯಕದೊಡನೆ ನಡೆದರೆ ನಾವು ಆರ್ಥಿಕವಾಗಿ ಸಾಮಾಜಿಕವಾಗಿ ಮೇಲೆ ಬರಲು ಸಾಧ್ಯವಾಗುತ್ತದೆ ಎಂದರು.

ವೇದಿಕೆ ಮೇಲೆ ಸುರ್ಪೂರ ತಾಲೂಕ್ ದಂಡಾಧಿಕಾರಿಗಳಾದ ಶ್ರಿ ಎಚ್, ಎ, ಸರಕಾವಸ್ ,ಶ್ರೀ ಬಸವರಾಜ್ ಸಜ್ಜನ್ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತಿ ಸುರಪುರ,ಬಸವರಾಜ್ ಟಣಕೇದಾರ ಪೌರಾಯುಕ್ತರು ಸುರಪುರ
ನಿಂಗಣ್ಣ ದೀವಳಗುಡ್ಡ ,ಚಂದಪ್ಪ, ಬಸವರಾಜ ಮುಸ್ಟಳ್ಳಿ, ಭೀಮಣ್ಣ ಬಿಲ್ಲವ,ಅಯ್ಯಪ್ಪ ಬಿಲ್ಲವ,ಸೋಮು, ಮಹೇಶ್ ಮುಂತಾದ ಹಲವು ಮುಖಂಡರು ಉಪಸ್ಥಿತರಿದ್ದರು.
ವರದಿ: ಶೇಕಪ್ಪ ಮಾದರ




