ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸುತ್ತಿದ್ದಾರೆ.
ಇದೇ ಹಿನ್ನೆಲೆಯಲ್ಲಿ, ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ಸಬಲೀಕರಣಕ್ಕೆ ಮೀಸಲಾಗಿರುವ ಸಖಿ ಆಟೋ ಸೇವೆ ನಾಳೆಯಿಂದ ಬೆಂಗಳೂರಿನಲ್ಲಿ ಚಾಲನೆ ಪಡೆಯಲಿದೆ.
ಮಹಿಳೆಯರ ಮೇಲಾಗುವ ದೌರ್ಜನ್ಯ, ವಂಚನೆ ತಡೆಗಟ್ಟಲು ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ಈ ಸೇವೆಯನ್ನು ಮಹಿಳಾ ಉದ್ಯಮಿ ಕೃಷ್ಣವಿ ಪರೇಖ್ ಆರಂಭಿಸಿದ್ದಾರೆ.
ಮುಂಬೈನಲ್ಲಿ ವ್ಯಾಸಂಗದ ಸಮಯದಲ್ಲಿ ಅನುಭವಿಸಿದ ಕಠಿಣ ಸಂದರ್ಭಗಳು ಈ ಸೇವೆ ಆರಂಭಕ್ಕೆ ಪ್ರೇರಣೆಯಾಗಿದ್ದು, ಇದರಿಂದ ಮಹಿಳೆಯರಿಗಾಗಿ ಪ್ರತ್ಯೇಕ ಸಾರಿಗೆ ವ್ಯವಸ್ಥೆ ರೂಪಿಸುವ ಉದ್ದೇಶವಿದೆ ಎಂದು ಅವರು ತಿಳಿಸಿದ್ದಾರೆ.




