ಐಗಳಿ : ಟ್ರ್ಯಾಕ್ಟರಗಳಲ್ಲಿ ಸೌಂಡ್ ಸಿಸ್ಟಮ್ ಅಳವಡಿಸಿಕೊಂಡು ಶಬ್ಧ ಮಾಲಿನ್ಯ, ಸಾರ್ವಜನಿಕರಿಗೆ ಮತ್ತು ರಸ್ತೆ ಸವಾರರಿಗೆ ತೊಂದರೆಯುಂಟು ಮಾಡುತ್ತಾ ವಾಹನ ಚಾಲನೆ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಸೌಂಡ್ ಸಿಸ್ಟಮ್ ವಶಪಡಿಸಿಕೊಂಡ ಐಗಳಿ ಪೊಲೀಸ್ ಠಾಣೆ ಪಿಎಸ್ಐ ಚಂದ್ರಶೇಖರ್ ಸಾಗನೂರು.
ಐಗಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಟ್ರಾಕ್ಟರ್ ನಲ್ಲಿ ಕಬ್ಬು ತುಂಬಿಕೊಂಡ ಹೋಗುವಾಗ ಅತಿ ಜೋರಾದ ಸೌಂಡ್ ಹಾಕಿ ಸಾರ್ವಜನಿಕರಿಗೆ ಕಿರಿಕಿರ ಉಂಟು ಮಾಡಿದ ಹಿನ್ನೆಲೆ ಟ್ರಾಕ್ಟರ್ ನಲ್ಲಿ ಇದ್ದ ಸೌಂಡ್ ಸಿಸ್ಟಮ್ ವಶಪಡಿಸಿಕೊಂಡು ಚಾಲಕನಿಗೆ ದಂಡ ವಿದಿಸಿಲಾಗಿದೆ ಆದರಿಂದ ಟ್ರಾಕ್ಟರ್ ಮಾಲೀಕರು ಮತ್ತು ಚಾಲಕರು ರಸ್ತೆಯಲ್ಲಿ ತೆರಳುವಾಗ ಇನ್ನೂ ಮುಂದೆ ಸೌಂಡ್ ಮಾಡಿದರೆ ತಮಗೂ ಈ ಬಿಸಿ ಮುಟ್ಟುತ್ತದೆ ಸಾವಿರಾರು ರೂ ಕರ್ಚ ಮಾಡಿ ಸೌಂಡ್ ಸಿಸ್ಟಮ್ ಹಾಕಿಕೊಳ್ಳವರು ಸ್ವಲ್ಪ ಸರ್ಕಾರದ ನಿಯಮಗಳನ್ನು ಪಾಲಿಸಿಬೇಕು ಇಲ್ಲದಿದ್ದರೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.




