Ad imageAd image

ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಆಯ್ಕೆ

Bharath Vaibhav
ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಆಯ್ಕೆ
WhatsApp Group Join Now
Telegram Group Join Now

ಸಿಂಧನೂರು : ಕರ್ನಾಟಕ ದಲಿತ ಸಂಘರ್ಷ ಸಮಿತಿ “ಭೀಮಮಾರ್ಗ” ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ತಾಲೂಕ ಹಾಗೂ ಗ್ರಾಮ ಘಟಕಗಳ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಮಾರ್ಗ ರಾಯಚೂರು ಜಿಲ್ಲಾಧ್ಯಕ್ಷ ಬಸವರಾಜ ತುರವಿಹಾಳ ತಿಳಿಸಿದರು.

ನಂತರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ರಾಜ್ಯಾಧ್ಯಕ್ಷ ಎಂ. ನಾರಾಯಣ ಬೆಂಗಳೂರು ಅವರ ಆದೇಶದಂತೆ, ಕಲಬುರಗಿ ವಿಭಾಗೀಯ ಅಧ್ಯಕ್ಷ ಮಂಜುನಾಥ ಸಾಸಲಮರಿ ಅವರ ಮಾರ್ಗದರ್ಶನದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ 15ನೇ ಫೆಬ್ರುವರಿ 2026 ರವಿವಾರ ರಂದು ಸಂಘಟನೆಯ ಪದಾಧಿಕಾರಿಗಳ ಸಭೆ ಕರೆದು ನೂತನ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು
ಸಿಂಧನೂರು ತಾಲೂಕ ಅಧ್ಯಕ್ಷರಾಗಿ ಬಸವರಾಜ ನಾಯಕ, ಉಪಾಧ್ಯಕ್ಷರಾಗಿ ಸುರೇಶ್ ಹುಡಾ, ಕಾನೂನು ಸಲಹೆಗಾರರಾಗಿ ಹೆಚ್. ನಾಗೇಶ್ ಗೊರೆಬಾಳ. ಮಸ್ಕಿ ತಾಲೂಕ ಅಧ್ಯಕ್ಷರಾಗಿ ರವಿಚಂದ್ರ ಕರಾಳಕುಂಟಿ. ಸಿರವಾರ ತಾಲೂಕ ಅಧ್ಯಕ್ಷರಾಗಿ ರವಿಕುಮಾರ್. ಸಿರವಾರ ತಾಲೂಕು ಉಪಾಧ್ಯಕ್ಷರಾಗಿ ಪರಶುರಾಮ್. ಸಿಂಧನೂರು ತಾಲೂಕ ಪ್ರಧಾನ ಕಾರ್ಯದರ್ಶಿಯಾಗಿ ಮೌನೇಶ್ ಸಾಸಲಮರಿ. ಸಾಸಲಮರಿ ಗ್ರಾಮ ಘಟಕ ಅಧ್ಯಕ್ಷರಾಗಿ ರಾಜು ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ  ಕಲ್ಬುರ್ಗಿ ವಿಭಾಗೀಯ ಅಧ್ಯಕ್ಷ ಮಂಜುನಾಥ ಸಾಸಲಮರಿ. ಜಿಲ್ಲಾಧ್ಯಕ್ಷ ಬಸವರಾಜ ತುರವಿಹಾಳ. ಅಯ್ಯಪ್ಪ ವಕೀಲರು ಮಲ್ಲಾಪುರ. ಬಸವರಾಜ.ಕೆ. ಇನ್ನಿತರ ಉಪಸ್ಥಿತರಿದ್ದರು.

ವರದಿ:ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!