Ad imageAd image

ಪತಿ ಸಾವನ್ನಪ್ಪಿದ ಸುದ್ದಿ ಕೇಳಿ ಪ್ರಾಣ ಬಿಟ್ಟ ಪತ್ನಿ 

Bharath Vaibhav
ಪತಿ ಸಾವನ್ನಪ್ಪಿದ ಸುದ್ದಿ ಕೇಳಿ ಪ್ರಾಣ ಬಿಟ್ಟ ಪತ್ನಿ 
WhatsApp Group Join Now
Telegram Group Join Now

ಬಾಗಲಕೋಟೆ: ರಾಜ್ಯದಲ್ಲೊಂದು ಮನಕಲಕುವ ಘಟನೆ ಎನ್ನುವಂತೆ ಬಾಗಲಕೋಟೆಯಲ್ಲಿ ಹೃದಯಾಘಾತದಿಂದ ಪತಿ ಸಾವನ್ನಪ್ಪಿದಂತ ಸುದ್ದಿ ಕೇಳಿದಂತ ಪತ್ನಿಯೂ ಪ್ರಾಣ ಬಿಟ್ಟಿರುವಂತ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ನಗರದಲ್ಲಿ ಪತಿಯ ಸಾವಿನ ಸುದ್ದಿ ಕೇಳಿದಂತ ಪತ್ನಿಯೂ ಹೃದಯಾಘಾತದಿಂದ ಸಾವನ್ನಪ್ಪಿರುವಂತ ಘಟನೆ ನಡೆದಿದೆ.ಆ ಮೂಲಕ ಪತಿ, ಪತ್ನಿ ಸಾವಿನಲ್ಲೂ ಒಂದಾಗಿರುವಂತ ಮನಕಲಕುವ ಘಟನೆ ನಡೆದಿದೆ.

ಲೋ ಬಿಪಿಯಿಂದ ಶಶಿಧರ್ ಪತ್ತಾರ್(40) ಮನೆಯಲ್ಲಿ ಕುಸಿದು ಬಿದ್ದಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತಾದರೂ, ಮಾರ್ಗ ಮಧ್ಯದಲ್ಲೇ ಹೃದಯಾಘಾತದಿಂದ ಅವರು ನಿಧನರಾಗಿದ್ದರು.

ಪತಿ ಶಶಿಧರ್ ಪತ್ತಾರ್ ಸಾವಿನ ಸುದ್ದಿ ಕೇಳಿದಂತ ಅವರ ಪತ್ನಿ ಸರೋಜಾ(35) ಮನೆಯಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪತಿ-ಪತ್ನಿ ಒಂದೇ ದಿನದಲ್ಲಿ ಸಾವನ್ನಪ್ಪಿದ್ದನ್ನು ಕಂಡು ಕುಟುಂಬಸ್ಥರು ಮಮ್ಮಲ ಮರುಗಿದ್ದಾರೆ. ಸಾವಿನಲ್ಲೂ ಒಂದಾದಂತ ಗಂಡ-ಹೆಂಡತಿಯ ಮನಕಲಕುವಂತ ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!