Ad imageAd image

ಫ್ರೀ ಸ್ಟೈಲ್ ಫುಟ್ಬಾಲ್ ಆಟಗಾರ ಜೇಮೀ ನೈಟ್ ಭೇಟಿ:ರೋಮಾಂಚನಗೊಂಡ ವಿದ್ಯಾ ರ್ಥಿಗಳು

Bharath Vaibhav
ಫ್ರೀ ಸ್ಟೈಲ್ ಫುಟ್ಬಾಲ್ ಆಟಗಾರ ಜೇಮೀ ನೈಟ್ ಭೇಟಿ:ರೋಮಾಂಚನಗೊಂಡ ವಿದ್ಯಾ ರ್ಥಿಗಳು
WhatsApp Group Join Now
Telegram Group Join Now

ಪೋದಾರ್ ಅಂತರರಾಷ್ಟ್ರೀಯ ತುಮಕೂರು ಶಾಲೆಗೆ ಫ್ರೀ ಸ್ಟೈಲ್ ಫುಟ್ಬಾಲ್ ಆಟಗಾರ ಜೇಮೀ ನೈಟ್ ಭೇಟಿ:ರೋಮಾಂಚನಗೊಂಡ ವಿದ್ಯಾ ರ್ಥಿಗಳು

ತುಮಕೂರು : ನಗರದಲ್ಲಿ ಇರುವ ಪ್ರಸಿದ್ಧ ಶಾಲೆಯಾದ ಪೋದಾರ್‌ ಅಂತರಾಷ್ಟ್ರೀಯ ಶಾಲೆಯಲ್ಲಿ ದಿನಾಂಕ. 18/2/2026ರ ಬುಧವಾರ ರಂದು 10:00 ಗಂಟೆಗೆ ಬೆಳಿಗ್ಗೆ ವಿಶ್ವದ ಅಗ್ರ ವೃತ್ತಿಪರ ಫ್ರೀಸ್ಟೈಲ್‌ ಪುಟ್ ಬಾಲ್‌ ಆಟಗಾರರು, ಗಿನ್ನಿಸ್‌ ದಾಖಲೆಯನ್ನು ಹೊಂದಿರುವ ಜೇಮಿ ನೈಟ್‌ ರವರು ಪೋದಾರ್‌ ಶಾಲೆಯ ವಿದ್ಯಾರ್ಥಿಗಳ ಜೊತೆ ವಿಶೇಷ ಸಂದರ್ಶನ ಮತ್ತು ಕಾರ್ಯಗಾರಕ್ಕೆ ಭೇಟಿ ನೀಡಿದರು.

ಶಾಲೆಯ ಗೌರವಾನ್ವಿತ ಪ್ರಾಂಶುಪಾಲರಾದ ಡಾ. ಲವ ಎಂ.ಬಿ.ರವರು ವಿವಿಧ ಜಾನಪದ ಕಲೆಗಳ ಮೂಲಕ ವೃತ್ತಿಪರ ಆಟಗಾರರಾದ ಜೇಮಿ ನೈಟ್‌ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಜೇಮಿ ಅವರ ಜೊತೆ ಪೋದಾರ್‌ ಅಕಾಡಮಿಯ ಎನ್ರಿಚ್ಮೆಂಟ್‌(ಪುಷ್ಟೀಕರಣ) ಅಕಾಡಮಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜ್ಯೋತಿ ಜಿ ಗಾಲಾರವರು ಅವರು ಬೆಂಬಲಿಗರಾಗಿ ಉಪಸ್ಥಿತರಾಗಿದ್ದರು.

ಜೇಮಿ ಈ ಭೇಟಿಯು ಅತ್ಯಂತ ಪ್ರೇರಣಾದಾಯಕವಾಗಿದ್ದು, ವಿದ್ಯಾರ್ಥಿಗಳು ಪುಟ್ ಬಾಲ್‌ ಆಟದ ಕೌಶಲ್ಯ ಮತ್ತು ಫ್ರೀಸ್ಟೈಲ್‌ ತಂತ್ರಗಳನ್ನು ನೇರವಾಗಿ ಕಲಿಯುವ ಅವಕಾಶವನ್ನು ಪಡೆದರು.
ಜೇಮಿ ಅವರು ಬಾಲಕ ಮತ್ತು ಬಾಲಕಿಯರಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ, ಕಲಿಕೆಯ ಪ್ರಗತಿ “ಗ್ರೋತ್‌ ಮೈಂಡ್‌ ಸೆಟ್‌” ( ವೃದ್ದಿ ದೃಷ್ಟಿಕೋನ) ಬೆಳವಣಿಗೆಯ ಮಹತ್ವವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಜೇಮಿಯ ಆಟದ ಅತ್ಯಂತ ಅಚ್ಚುಕಟ್ಟಾದ ತಂತ್ರಗಳು ಮತ್ತು ಅವರ ಆಟದ ಪ್ರದರ್ಶನವು ಹಲವು ವಿದ್ಯಾರ್ಥಿಗಳನ್ನು ಆಕರ್ಷಿಸಿತು ಹಾಗೂ ವಿದ್ಯಾರ್ಥಿಗಳು ಜೇಮಿಯೊಂದಿಗೆ ಆಟದ ಕುರಿತು ಸಂವಹನ ನಡೆಸಿ ತಮ್ಮ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಪಡೆದರು. ಪೋಷಕರು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಶಾಲೆಯ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ:ಶಿವಾನಂದ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!