ಸೇಡಂ : ತಾಲೂಕಿನ ಸಿಲಾರಕೋಟ್ ಗ್ರಾಮದಲ್ಲಿ ಬಹುದಿನಗಳ ಕಾಯುವಿಕೆ ನಂತರ ಹಿಂದೂ ಧರ್ಮದ ಪಿತಾಮಹ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಮತ್ತು ಜಯಂತ್ಯೋತ್ಸವ ಕಾರ್ಯಕ್ರಮವನ್ನು ವಿವಿಧ ರಸ್ತೆಗಳ ಮುಖಾಂತರ ಮೆರವಣಿಗೆ ಮೂಲಕ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಮೆರವಣಿಗೆ ನಂತರ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಪುತ್ಥಳಿ ಹತ್ತಿರಕ್ಕೆ ತಲುಪಿತು ಮೂರ್ತಿಯನ್ನು ಕಾಣಿಕೆಯಾಗಿ ನೀಡಿರುವ ಚಿನ್ನರಾಜು ಸ್ವಾಮಿ ಅವರು ಪುತ್ಥಳಿ ಅನಾವರಣ ಮತ್ತು ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂಧರ್ಭದಲ್ಲಿ ಊರಿನ ಹಿರಿಯ ಮುಖಂಡರಾದ ಹರ್ಷವರ್ಧನ್ ರೆಡ್ಡಿ ಪಾಟೀಲ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಡಾ.ಮಧುಸೂಧನ್ ರೆಡ್ಡಿ ಪಾಟೀಲ್, ಭೀಮರೆಡ್ಡಿ ದೇವಾಡಿ, ನಾಗೇಂದ್ರಪ್ಪ ಸಾಹುಕಾರ್, ಶ್ರೀನಿವಾಸ್ ರೆಡ್ಡಿ ಪಸಲೋದೀ, ಮಹಿಪಾಲ್ ರೆಡ್ಡಿ, ಕಿಷ್ಟರೆಡ್ಡಿ, ಶ್ರೀನಿವಾಸ್ ಪೊಟ್ಟಿ, ಸಾಯಿರೆಡ್ಡಿ, ರಾಜು ಸ್ವಾಮಿ ಜೋಶಿ ಸೇರಿದಂತೆ ಇನ್ನಿತರರು ಊರಿನ ಮುಖಂಡರು ಭಾಗಿಯಾಗಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




