Ad imageAd image

ರಾಜಕಾರಣದಲ್ಲಿ ಹೊಸ ತಿರುವು ಪಡೆಯಲಿದೆ : ಬಬಲಾದಿ ಸದಾಶಿವ ಮುತ್ಯಾರ ಭವಿಷ್ಯ 

Bharath Vaibhav
ರಾಜಕಾರಣದಲ್ಲಿ ಹೊಸ ತಿರುವು ಪಡೆಯಲಿದೆ : ಬಬಲಾದಿ ಸದಾಶಿವ ಮುತ್ಯಾರ ಭವಿಷ್ಯ 
WhatsApp Group Join Now
Telegram Group Join Now

ಬಾಗಲಕೋಟೆ : ವಿಜಯಪುರದ ಬೆಂಕಿ ಬಬಲಾದಿ ಸದಾಶಿವ ಮುತ್ಯಾನಮಠದ ಶ್ರೀ ಸದಾಶಿವ ಮುತ್ಯಾ ಸ್ಪೋಟಕ ಕಾಲಜ್ಞಾನ ಭವಿಷ್ಯ ನುಡಿದಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ತಿರುವು ಪಡೆಯಲಿದೆ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಈ ವರ್ಷ (2026) 1948 ಪ್ರಭಾವನ ನಾಮ ಸಂವತ್ಸರದಲ್ಲಿ ಈ ವರ್ಷದ ಶುಭಾಶಯಗಳು ಚಿಕ್ಕ ಮಕ್ಕಳಿಗೆ ರೋಗ ಹೆಚ್ಚಾಗಲಿದ್ದು, ಜನಗಳಿಗೆ ಸ್ವಲ್ಪ ಸುಧಾರಣೆ ಆಗುತ್ತದೆ.

ಪ್ರಜೆಗಳ ನಡುವೆ ಕಲಹ ಹೆಚ್ಚಾಗುತ್ತದೆ. ಅಗ್ನಿ ಅನಾಹುತಗಳು ಆಗಲಿವೆ. ದೊಡ್ಡ ದುಃಖದ ಸುದ್ದಿ ಬಂದಿತಣ್ಣ ಪಾಪದ ಕೆಲಸ ಹೆಚ್ಚಾದಿತು. ಕಾಡುಪ್ರಾಣಿಗಳಿಗೆ ತೊಂದರೆ ಆದಿತು, ಉತ್ತರ ಭಾರತದಲ್ಲಿ ಅತಿ ಮಳೆಯಾಗಿ ಕೆಲವು ಕಡೆ ಅತಿವೃಷ್ಟಿ ಆಗಲಿದೆ.

ವಿಶ್ವದ ಕೆಲವು ಕಡೆ ಭೂಕುಸಿತ ಆಗುವ ಸಾಧ್ಯತೆ ಇದೆ. ರೈತರಿಗೆ ಹೆಚ್ಚಿನ ಒಳ್ಳೆಯದಾಗುತ್ತೆ ರಾಜ್ಯ ರಾಜಕೀಯದಲ್ಲಿ ಹೊಸ ತಿರುವುಗಳು ಕಂಡು ಬರಲಿವೆ ಈ ವರ್ಷದಲ್ಲಿ ಗಡಿ ಭಾಗದಲ್ಲಿ ಯುದ್ಧದಲ್ಲಿ ಕಾರ್ಮೋಡ. ನೈಸರ್ಗಿಕ ವಿಕೋಪ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಆಗಲಿದೆ. ಶ್ರೀಮಂತ ಬಡವರ ನಡುವಿನ ಅಂತರ ಕಡಿಮೆಯಾಗಲಿದೆ.

ಭೂಕುಸಿತ ನೈಸರ್ಗಿಕ ವಿಕೋಪಗಳು ಎದುರಾಗಬಹುದು ಹೆಚ್ಚಿನ ಸವಾಲು ಎದುರಿಸುವ ದಿನ ಬಂದಿತು. ಜನರ ಆರೋಗ್ಯದಲ್ಲಿ ಸುಧಾರಣೆ ಆಗಲಿದೆ.

ಈ ವರ್ಷದಲ್ಲಿ ಬಹಳ ಪ್ರಮಾಣದಲ್ಲಿ ಮಳೆ ಆಗಲಿದೆ. ಪ್ರವಾಹ ಭೀತಿ ಆಗುವ ಸಾಧ್ಯತೆ ಇದೆ. ಉದ್ಯೋಗಗಳು ಉತ್ತಮ ಆರ್ಥಿಕ ಕ್ರಾಂತಿ ಆಗಲಿದೆ ಎಂದು ಕಾಲಜ್ಞಾನ  ನುಡಿದರು.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!