Ad imageAd image

ಸಾರಿಗೆ ನೌಕರರ ಮುಷ್ಕರ ನಿರ್ಧಾರ ವಾಪಸ್ : ನಾಳೆ ಎಂದಿನಂತೆ ಬಸ್ ಸಂಚಾರ

Bharath Vaibhav
ಸಾರಿಗೆ ನೌಕರರ ಮುಷ್ಕರ ನಿರ್ಧಾರ ವಾಪಸ್ : ನಾಳೆ ಎಂದಿನಂತೆ ಬಸ್ ಸಂಚಾರ
ksrtc
WhatsApp Group Join Now
Telegram Group Join Now

ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮುಷ್ಕರ ನಡೆಸಿದ್ದು ಇದೀಗ ಜಂಟಿ ಕ್ರಿಯಾ ಸಮಿತಿ ಜೊತೆಗೆ ಸಭೆ ನಡೆಸಿದ ಬಳಿಕ ಮುಷ್ಕರ ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದ್ದು ಹಾಗಾಗಿ ನಾಳೆ ರಾಜ್ಯಾದ್ಯಂತ ಎಂದನಂತೆ ಬಸ್ ಸಂಚಾರ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಾರಿಗೆ ನೌಕರರ ಪ್ರತಿಭಟನೆ ವಾಪಸ್ ತೆಗೆದುಕೊಳ್ಳಲು ನಿರ್ಧರಿಸಿದ್ದು, ಮುಷ್ಕರ ಮಾಡದಿರಲು ಜಂಟಿ ಕ್ರಿಯ ಸಮಿತಿ ಇದೀಗ ತೀರ್ಮಾನ ಮಾಡಿದೆ. ಹಾಗಾಗಿ ನಾಳೆಯಿಂದ ಬಸ್ಸುಗಳು ಎಂದಿನಂತೆ ಸಂಚಾರ ಮಾಡುವ ಸಾಧ್ಯತೆ ಇದೆ.

ಮುಂದಿನ ಸಭೆಯಲ್ಲಿ ಬೇಡಿಕೆ ಈಡೇರಿಗೆ ಮನವಿ ಮಾಡಲಾಗಿದೆ. ಮನವಿ ಮಾಡೋದಕ್ಕೆ ಸಮಿತಿ ತೀರ್ಮಾನ ಮಾಡಿದೆ ಬಜೆಟ್ ನಂತರ ವೇತನ ಪರಿಷ್ಕರಣಿಯ ಬಗ್ಗೆ ಸಭೆ ನಡೆಸಲಿದ್ದು ಸಿಎಂ ಸಿದ್ದರಾಮಯ್ಯ ಜೊತೆಗೆ ಸಾರಿಗೆ ಮುಖಂಡರ ಸಭೆ ನಡೆಯಲಿದೆ.

ಇದಕ್ಕೂ ಮುನ್ನ l 1,271 ಕೋಟಿ ಹಣ ಕೊಡಲು ಸರ್ಕಾರ ಒಪ್ಪಿಕೊಂಡಿದೆ. ಬಜೆಟ್ ನಲ್ಲಿ ಹಣ ಪಡೆದುಕೊಂಡು ಅತಿ ಶೀಘ್ರದಲ್ಲಿ ನೀಡುತ್ತೇವೆ ಎಂದು ಪ್ರತಿಭಟನಾ ಸ್ಥಳದಲ್ಲಿ ಕೆಎಸ್‌ಆರ್ಟಿಸಿ ಎಮ್ ಡಿ ಅಕ್ರಂ ಪಾಷಾ ಭರವಸೆ ನೀಡಿದರು.

ಆದರೆ ಸಾರಿಗೆ ನೌಕರರು ಮತ್ತೆ ವಿರೋಧ ವ್ಯಕ್ತಪಡಿಸಿದರು. ನಾವು ಇದನ್ನು ಒಪ್ಪಿಕೊಳ್ಳಲ್ಲ ನಾವು ನಿಮ್ಮ ಮುಂದೆ ಪ್ರಮುಖ 2 ಬೇಡಿಕೆಗಳನ್ನು ನಿಮ್ಮ ಮುಂದೆ ಇಟ್ಟಿದ್ದೇವೆ ಅದನ್ನು ಈಡೇರಿಸುವಂತಹ ಕೆಲಸವನ್ನು ಮೊದಲು ಮಾಡಿ ಎಂದು ಸಾರಿಗೆ ನೌಕರರು ಆಗ್ರಹಿಸಿದ್ದಾರೆ.

ಸಾರಿಗೆ ಸಿಬ್ಬಂದಿ ಬೇಡಿಕೆಗಳು ಈಡೇರಿಕೆಗೆ ಮೊದಲ ಆದ್ಯತೆ ನೀಡಿದ್ದೇವೆ. ನಿವೃತ್ತ ನೌಕರರಿಗೆ ಗ್ರ್ಯಾಚುಟಿ 100 ಕೋಟಿ ಬಿಡುಗಡೆ ಮಾಡಿದ್ದೇವೆ. ಅಲ್ಲದೆ 1,272 ಕೋಟಿ ಹಿಂಬಾಕಿ ವೇತನ ನೀಡಲು ಸರ್ಕಾರ ನಿರ್ಧರಿಸಿದೆ.

ಉಳಿದ ವಿಚಾರಗಳ ಬಗ್ಗೆ ಸಂಘಟನೆ ಮುಖಂಡರ ಜೊತೆಗೆ ಚರ್ಚಿಸುತ್ತೇವೆ ಎಂದು ಫ್ರೀಡಂ ಪಾರ್ಕ್ ನಲ್ಲಿ ಕೆಎಸ್‌ಆರ್ಟಿಸಿ ಎಂಡಿ ಅಕ್ರಂ ಪಾಷಾ ಹೇಳಿಕೆ ನೀಡಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!