ಮೊಳಕಾಲ್ಮೂರು : ಶನಿವಾರ ಮೊಳಕಾಲ್ಮುರು ಪಟ್ಟಣದ ವರವಲಯದಲ್ಲಿರುವ ನೂತನವಾಗಿ ಉದ್ಘಾಟನೆಗೊಳ್ಳಲಿರುವ ಪಿಎಂ ಅಂಡ್ ಸನ್ ಸ್ಯಾರಿಸ್ ಅಂಗಡಿ ಮಳಿಗೆಯನ್ನು ವೀಕ್ಷಣೆ ಮಾಡಿ ಅವರು ಮಾತನಾಡಿದರು. ಸಿಟಿ ಎಂ ಆರ್ ಐ ಸ್ಕ್ಯಾನಿಂಗ್ ಉಚಿತ ಸೇವೆ ಸ್ಥಗಿತವಾಗಿ ಬಡವರ ಆರೋಗ್ಯಕ್ಕೆ ಕುತ್ತು ತಂದಿದೆ ಎಂದಿದೆ ಎಂದು ಮಾಜಿ ಸಚಿವ ಶ್ರೀರಾಮುಲು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗ್ಯಾರಂಟಿ ಸರ್ಕಾರದಲ್ಲಿ ಹಣವಿಲ್ಲ 50ಕೋಟಿ ಸರ್ಕಾರ,ಖಾಸಗಿ ಕಂಪನಿಗೆ ಒಡಂಬಡಿಕೆಯಿಂದ 50ಕೋಟಿ ಬಿಡುಗಡೆಗೂ ಮೀನಾಮೇಶ ಮಾಡ್ತಾ ಇರೋದ್ರಿಂದ ಈ ಎಲ್ಲಾ ಆರೋಗ್ಯ ಸೇವೆಗಳು ಸ್ಥಗಿತವಾಗಿದೆ.ಇದರಿಂದ ಸಾಕಷ್ಟು ಜನರಿಗೆ ಸಮಸ್ಯೆ ಆಗುತ್ತಿದೆ.ಆರೋಗ್ಯ ಇಲಾಖೆ ಉಚಿತ ಸೇವೆ ಸ್ಥಗಿತದದಿಂದ ಸಾಕಷ್ಟು ಜನರಿಗೆ ಅನ್ಯಾಯವಾಗುತ್ತಿದೆ. ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು ಹೋಗಿದೆ, ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ಎಲ್ಲಾ ಶಾಸಕರು ಪ್ರವಾಸದಲ್ಲಿ ಇದ್ದಾರೆ ಇವರಿಗೆ ಅಭಿವೃದ್ಧಿ ಬಗ್ಗೆ ಮಾತ್ರ ಬೇಕಿಲ್ಲ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನೇ ಮುಂದುವರಿಸಿಕೊಂಡು ಹೋಗುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು. ಆರೋಗ್ಯ ಮಂತ್ರಿಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗಿ ಕುಳಿತಿದ್ದಾರೆ. ಪ್ರಧಾನ ಮಂತ್ರಿಗಳಿಗೆ ಹೆಸರು ಬರುತ್ತದೆ ಎಂಬ ವಿಚಾರದಲ್ಲಿ ಜನೌಷಧಿ ಕೇಂದ್ರಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯು ಸಂಪೂರ್ಣ ಮಾಡಲು ಹಣವಿಲ್ಲ ಬಿಜೆಪಿ ಸರ್ಕಾರ ಬಂದರೆ ಮಾತ್ರ ಈ ಸಮಸ್ಯೆ ಭಗರಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿಯ ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಹಾಗೂ ಪಿಎಂ ಸಿಲ್ಕ್ಸ್ ಅಂಡ್ ಸ್ಯಾರೀಸ್ ಡಾ ಪಿ ಎಂ ಮಂಜುನಾಥ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಲಕ್ಷ್ಮಣ್ ಮಾಜಿ ಉಪಾಧ್ಯಕ್ಷರಾದ ಎಂ ಎನ್ ಮಂಜಣ್ಣ, ಕಿರಣ್ ಗಾಯಕ್ವಾಟ್, ರವಿ, ಬಿಜೆಪಿ ಮುಖಂಡರಾದ ಪಾಪೇಶ್ ನಾಯಕ್, ತುಮಕೂರಹಳ್ಳಿ ಮಂಜುನಾಥ್, ಪ್ರಭು ಸಿದ್ದಾರ್ಥ್, ಇನ್ನು ಹಲವು ಮುಖಂಡರು ಉಪಸ್ಥಿತರಿದ್ದರು.
ವರದಿ : ಪಿಎಂ ಗಂಗಾಧರ




