Ad imageAd image

ಜನನಾಯಕ ಬಸನಗೌಡ ಬಾದರ್ಲಿ ಜನುಮದಿನ: ಅಮರೇಶ್ ಗಿರಿಜಾಲಿ

Bharath Vaibhav
ಜನನಾಯಕ ಬಸನಗೌಡ ಬಾದರ್ಲಿ ಜನುಮದಿನ: ಅಮರೇಶ್ ಗಿರಿಜಾಲಿ
WhatsApp Group Join Now
Telegram Group Join Now

ಸಿಂಧನೂರು : ಕರ್ನಾಟಕ ಪ್ರದೇಶ ಬ್ಲಾಕ್ ಕಾಂಗ್ರೆಸ್ ಸಮಿತಿ ಎಸ್. ಸಿ. ಘಟಕ ಯುವ ಕಾಂಗ್ರೆಸ್ ಸಮಿತಿ ಸಿಂಧನೂರು ಹಾಗೂ ಬಸನಗೌಡ ಬಾದರ್ಲಿ ಅಭಿಮಾನಿ ಬಳಗ ಸಿಂಧನೂರು ಇವರುಗಳ ವತಿಯಿಂದ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಬಸನಗೌಡ ಬಾದರ್ಲಿ ಅವರ ೪೩ನೇ ವರ್ಷದ ಜನ್ಮದಿನ ಸಮಾರಂಭ ಕಾರ್ಯಕ್ರಮವನ್ನು ನಗರದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಆಶ್ರಯದಾತರುಗಳಿಗೆ ಅನ್ನ ಸಂತರ್ಪಣೆ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ನೆರವೇರಿತು.

ಈ ಕಾರ್ಯಕ್ರಮವನ್ನು ಎಸ್. ಸಿ. ಘಟಕದ ತಾಲೂಕ ಅಧ್ಯಕ್ಷರಾದ ಅಮರೇಶ ಗಿರಿಜಾಲಿ ಹಾಗೂ ಕಾಂಗ್ರೆಸ್ ನ ಹಿರಿಯ ಗಣ್ಯರ ಸಮಕ್ಷಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಲಾಯಿತು.

ನಂತರ ಆಶ್ರಮದ ವತಿಯಿಂದ ಕಾಂಗ್ರೆಸ್ ಸಮಿತಿ ಎಸ್ ಸಿ ಯುವ ಘಟಕದ ತಾಲೂಕಾಧ್ಯಕ್ಷರಾದ ಅಮರೇಶ ಗಿರಿಜಾಲಿ ಪಕ್ಷದ ಯುವ ಮುಖಂಡರಾದ ಖಾಜಾ ಹುಸೇನ್ ರೌಡಕುಂದ ಇವರುಗಳನ್ನು ಆಶ್ರಮದ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಅಮರೇಶ ಗಿರಿಜಾಲಿ ಮಾತನಾಡಿ ಇಂದು ನಮ್ಮ ನಾಯಕನ ಜನ್ಮದಿನ ಕಾರುಣ್ಯ ಕುಟುಂಬದಲ್ಲಿ ಆಚರಿಸುತ್ತಿರುವುದು. ನಮ್ಮೆಲ್ಲರಿಗೂ ಸಂತೋಷವನ್ನುಂಟು ಮಾಡಿದೆ. ಸಾಮಾನ್ಯ ರೈತನ ಮಗನಾಗಿದ್ದ ಬಸನಗೌಡ ಬಾದರ್ಲಿ ಅವರು ಈಗ ವಿಧಾನ ಪರಿಷತ್ ಸದಸ್ಯರಾಗಿ ದೀನದಲಿತರ ಬಡಜನರ ನೊಂದ ಜೀವಿಗಳ ನಾಡಿಮಿಡಿತವಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಬಹುದೊಡ್ಡ ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತಿರುವ ನಮ್ಮ ನಾಯಕರು ಸರ್ವ ಸಮಾಜದ ಪ್ರೀತಿಗೆ ಪಾತ್ರರಾಗಿದ್ದಾರೆ ಬಸನಗೌಡ್ರು ಅಪರೂಪದ ರಾಜಕಾರಣಿಯಾಗಿ ನಮ್ಮೆಲ್ಲರಿಗೆ ಸ್ಪೂರ್ತಿಯಾಗಿದ್ದಾರೆ ನಮ್ಮೆಲ್ಲರನ್ನು ಸ್ವಂತ ಸಹೋದರರಂತೆ ಕಾಣುವ ಮೂಲಕ ನಮಗೆ ಮಾದರಿಯಾಗಿದ್ದಾರೆ. ಅವರ ರಾಜಕಾರಣ ಸಿಂಧನೂರು ತಾಲೂಕಿನಲ್ಲಿ ಇತಿಹಾಸ ಸೃಷ್ಟಿಸಿದೆ

ಸಿಂಧನೂರನ್ನು ಜಿಲ್ಲೆಯನ್ನಾಗಿಸಬೇಕು ಎನ್ನುವ ಅವರ ಸಂಕಲ್ಪಕ್ಕೆ ಸರ್ವ ಸಮಾಜದ ಗುರು ಹಿರಿಯರು ಸಂಘ-ಸಂಸ್ಥೆಗಳು ಬೆಂಬಲಿಸಿರುವುದು ಅವರಿಗೆ ಇನ್ನೂ ಹೆಚ್ಚಿನ ಹೋರಾಟ ಮಾಡಲು ಶಕ್ತಿ ತುಂಬಿದಂತಾಗಿದೆ ಇಡೀ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿ ಅಪರೂಪದ ಶ್ರೇಷ್ಠ ಯುವಶಕ್ತಿಯಾಗಿ ಬರೀ ನಮ್ಮ ರಾಜ್ಯಕ್ಕಲ್ಲದೆ ದೇಶಕ್ಕೆ ಮಾದರಿಯಾಗಿರುವ ಬಸನಗೌಡ ಬಾದರ್ಲಿ ನಮ್ಮೆಲ್ಲರಿಗೆ ಸ್ಪೂರ್ತಿ ಇಂದು ನಾವೆಲ್ಲರೂ ಅವರ ಜನ್ಮದಿನವನ್ನು ಕಾರುಣ್ಯ ಆಶ್ರಮದಲ್ಲಿ ಆಚರಣೆ ಮಾಡುತ್ತಿರುವುದು ಸರಳವಾದರೂ ಕೂಡ ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ಅವರ ಜನ್ಮದಿನವನ್ನು ನಾವೆಲ್ಲರೂ ಆಚರಿಸುತ್ತಿದ್ದೇವೆ ಎಂದರು

ನಂತರ ಯುವ ಮುಖಂಡರಾದ ಖಾಜಾ ಹುಸೇನ್ ರೌಡಕುಂದ ಮಾತನಾಡಿ ನಮ್ಮೆಲ್ಲರಿಗೆ ಸನ್ಮಾರ್ಗದ ಹಾದಿಯಲ್ಲಿ ನಮ್ಮ ನಾಯಕರು ತಮ್ಮ ಸ್ವಂತ ಭವಿಷ್ಯವನ್ನು ಯೋಚನೆ ಮಾಡದೆ ತಮ್ಮ ಇಡೀ ಜೀವನವನ್ನು ರಾಜಕಾರಣದ ಮೂಲಕ ಶುದ್ಧ ಸಮಾಜವನ್ನು ನಿರ್ಮಿಸುವ ಅವರ ಹೋರಾಟಕ್ಕೆ ನಾವುಗಳೆಲ್ಲರೂ ಸದಾ ಕಾಲ ಅವರ ಜೊತೆಗಿರುತ್ತೇವೆ. ಕೊರೋನಾದಂತಹ ಭೀಕರದ ದಿನಗಳಲ್ಲಿ ತಮ್ಮ ಜೀವನವನ್ನು ಲೆಕ್ಕಿಸದೆ ನಮ್ಮ ಸಿಂಧನೂರು ತಾಲೂಕ ಅಲ್ಲದೆ ಇಡೀ ರಾಜ್ಯಕ್ಕೆ ಇವರು ಮಾಡಿರುವ ಸೇವೆ ಅನೇಕ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದರು
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಬೀಬ್ ಖಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಯುವ ಕಾಂಗ್ರೆಸ್ ಸಮಿತಿ. ತಿಮ್ಮಣ್ಣ ನಾಯಕ. ಹಂಪಮ್ಮ ವಲಕಮದಿನ್ನಿ. ನಿರುಪಾದಿ ಸಾಸಲಮರಿ. ಅಮರಯ್ಯ ಸ್ವಾಮಿ ಹಿರೇಮಠ ಪ್ರಧಾನ ಅರ್ಚಕರು ಆದಿಶಕ್ತಿ ಶ್ರೀ ದ್ಯಾವಮ್ಮ ದೇವಿ ದೇವಸ್ಥಾನ ಹರೇಟನೂರು ಹಾಗೂ ಸಂಸ್ಥಾಪಕರು ಕಾರುಣ್ಯ ಆಶ್ರಮ ಸಿಂಧನೂರು.

ಹನುಮಂತ ಕರ್ನಿ ಅಧ್ಯಕ್ಷರು ಎನ್. ಯು. ಸಿ. ಐ. ಸಿಂಧನೂರು. ಹುಸೇನಪ್ಪ ಧುಮತಿ. ಆದನಗೌಡ. ಫಕೀರಪ್ಪ ರಾಮತ್ನಾಳ ಅಧ್ಯಕ್ಷರು ಅಸಂಘಟಿತ ಕಾರ್ಮಿಕ ಘಟಕ. ಫ್ರಾನ್ಸ್ ರೈತನಗರ ಕ್ಯಾಂಪ್. ವೀರೇಶ ಉಪ್ಪಲದೊಡ್ಡಿ. ಶಾಬಾಜ್ ಅಧ್ಯಕ್ಷರು ಯುವ ಕಾಂಗ್ರೆಸ್ ಸಮಿತಿ ಸಿಂಧನೂರು ನಗರ. ಶ್ಯಾಮೀದ್ ಗುಂಜಳ್ಳಿ ಅಧ್ಯಕ್ಷರು ಯುವ ಕಾಂಗ್ರೆಸ್ ಸಮಿತಿ ಮಸ್ಕಿ. ರಾಮಾಚಾರಿ ಯುವ ಮುಖಂಡರು ಬೆಳಗುರ್ಕಿ.ಹನುಮೇಶ ಬೆಳಗುರ್ಕಿ ಆಪ್ತ ಸಹಾಯಕರು. ಸಮೀನಾ. ಅಮರೇಶ ಹತ್ತಿಗುಡ್ಡ. ಖಾದರ್ ಬಿ. ಜೈನಾಬಿ. ಚಾಮುಂಡಿ. ವಜ್ರಮ್ಮ. ನವೀನ್. ಹನುಮೇಶ. ತಿಮ್ಮಣ್ಣ. ಅಶೋಕ ಮೇಗಳಮನಿ ಗೊರೆಬಾಳ. ಸುದೀಪ್. ಶ್ರವಣ್ ಕುಮಾರ್. ಮುನ್ನಾ. ಮೈಬೂ. ಮಂಜು. ಪ್ರದೀಪ್ ಗೊರೆಬಾಳ. ಮಂಜುನಾಥಗೌಡ. ಚಂದ್ರು ಗೌಡ ಬಾದರ್ಲಿ. ಬಸವರಾಜ ಜಾಲವಾಡಗಿ. ಕುಮಾರ್ ಚವಾಣ್. ರಫಿ. ಖಾಜಾ ಬಂದೇನವಾಜ್. ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ. ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲ್ಲದಗುಡ್ಡ. ಸಿದ್ದಯ್ಯ ಸ್ವಾಮಿ. ಮರಿಯಪ್ಪ.ಜ್ಯೋತಿ. ಹಾಗೂ ಬಸನಗೌಡ ಬಾದರ್ಲಿ ಅಭಿಮಾನಿ ಬಳಗದ ಹಲವಾರು ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಉಪಸ್ಥಿತರಿದ್ದರು

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!