ಹುಕ್ಕೇರಿ : ಸೋಮವಾರ (ನಿನ್ನೆ ) ತಡ ರಾತ್ರಿ ದತ್ತಾತ್ರೇಯ ಥೋರವತ್ (40) ಎಂಬ ಯುವಕನ ಮೇಲೆ ಗುಂಪೊಂದು ತಲವಾರದಿಂದ ಹಲ್ಲೆ ನಡೆಸಿದೆ.
ಸಾಯಿ ಮಂಗಲ ಕಾರ್ಯಾಲಯದಿಂದ ದತ್ತಾತ್ರೇಯ ಹಾಗೂ ಶ್ರೀಕಾಂತ ಪರೀಟ್ ಇಬ್ಬರೂ ತಮ್ಮ, ತಮ್ಮ ದ್ವಿಚಕ್ರ ವಾಹನದ ಮೇಲಿಂದ ಬರತ್ತಿದ್ದ ವೇಳೆಯಲ್ಲಿ ನಿಡಸೋಸಿ ಕಡೆಯಿಂದ ಕಾರಿನಲ್ಲಿ ಬಂದು ಆರೋಪಿಗಳು ದತ್ತಾತ್ರೇಯ ಎಂಬುವನ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಹಿಂಬದಿಯಿಂದ ಡಿಕ್ಕಿ ಹೊಡೆದು ನಾಲ್ಕು ಜನರ ಗುಂಪು ತಲವಾರದಿಂದ ಕೂತ್ತಿಗೆಗೆ ಹಾಗೂ ಬಲಗೈಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.ಸರಕಾರಿ ಆಸ್ಪತ್ರೆಯಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಗಡಹಿಂಗ್ಲಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿಯುತ್ತಿದಂತೆ ರಾತ್ರಿ ಹೊತ್ತು ಘಟನಾ ಸ್ಥಳಕ್ಕೆ ಎಸ್.ಪಿ. ಕೆ.ರಾಮರಾಜನ್ ಸೇರಿದಂತೆ ಪೋಲಿಸ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಸಂಕೇಶ್ವರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಿಗಾಗಿ ಪೋಲಿಸರು ಶೋಧ ನಡೆಸಿದ್ದಾರೆ
ಇನ್ನೂ ಈ ಪ್ರಕರಣಕ್ಕೆ ಸಂಬಂದಿಸಿದಂತೆ ನಮ್ಮ ರಿಪೋರ್ಟರ ವಿನಾಯಕ ದೂರವಾಣಿ ಸಂಪರ್ಕದಲ್ಲಿದ್ದಾರೆ.. ವಿನಾಯಕ ಈ ಪ್ರಕರಣದ ಕುರಿತು ಏನೆಲ್ಲಾ ಮಾಹಿತಿ ಸಿಕ್ಕಿದೆ.
ಧನ್ಯವಾದ ವಿನಾಯಕ ನಿಮ್ಮೆಲ್ಲ ಮಾಹಿತಿಗಾಗಿ
ವರದಿ : ರಾಜು ಮುಂಡೆ




