Ad imageAd image

ಬೇಡಕಿಹಾಳ ಸರ್ಕಲ್ ದಲ್ಲಿ ಫ್ಯಾಷನ್ ಡಿಸೈನ್ ಮತ್ತು ಡೆಕೋರೇಷನ್ ತರಬೇತಿ ಕೇಂದ್ರ ಉದ್ಘಾಟನೆ

Bharath Vaibhav
ಬೇಡಕಿಹಾಳ ಸರ್ಕಲ್ ದಲ್ಲಿ ಫ್ಯಾಷನ್ ಡಿಸೈನ್ ಮತ್ತು ಡೆಕೋರೇಷನ್ ತರಬೇತಿ ಕೇಂದ್ರ ಉದ್ಘಾಟನೆ
WhatsApp Group Join Now
Telegram Group Join Now

ಮಹಿಳಾ ಸಬಲೀಕರಣಕ್ಕೆ ಹೊಸ ಹೆಜ್ಜೆ

ನಿಪ್ಪಾಣಿ :  ಮಹಿಳೆ ಕೇವಲ ಮನೆ ಮಕ್ಕಳು ಒಲೆಗಷ್ಟೇ ಸೀಮಿತವಾಗಿರದೆ ತನ್ನಲ್ಲಿ ಹುದುಗಿದ್ದ ಸೂಪ್ತ ಕಲೆಯನ್ನು ಪ್ರದರ್ಶಿಸಿ ಬದುಕಿನಲ್ಲಿ ಯಶಸ್ಸಿನ ಹೆಜ್ಜೆ ಹಾಕಬೇಕೆಂದು ಭಿವಡಿ ರಾಜಸ್ಥಾನದ ವರ್ಧಮಾನ್ ಸೇವಾ ಟ್ರಸ್ಟ್ ಅಧ್ಯಕ್ಷ ಅಶೋಕ್ ಜೈನ್ ಮಹಿಳೆಯರಿಗೆ ಕಿವಿಮಾತು ಹೇಳಿದರು ಚಿಕ್ಕೋಡಿ ತಾಲೂಕಿನ ಶಮನೇವಾಡಿ ಬೇಡಕಿಹಾಳ ಸರ್ಕಲ್ ದಲ್ಲಿ ಮಹಿಳೆಯರ ಸ್ವ ಉದ್ಯೋಗಕ್ಕಾಗಿ ಪ್ರಾರಂಭಿಸಲಾದ ಫ್ಯಾಷನ್ ಡಿಸೈನ್ ಹಾಗೂ ಡೆಕೋರೇಷನ್ ಟ್ರೈನಿಂಗ್ ಕೇಂದ್ರದ ಉದ್ಘಾಟನೆ ಮಾಡಿ ಮಾತನಾಡಿದರು. ಪ್ರಾರಂಭದಲ್ಲಿ ವಿನಯಶ್ರೀ ಅಭಿನಂದನ್ ಪಾಟೀಲರ ಹಸ್ತದಿಂದ ಕೇಂದ್ರದ ಉದ್ಘಾಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿಯ ಪ್ರತಿ ಹಳ್ಳಿಗಳಲ್ಲಿಯ ಮಹಿಳೆಯರ ಕೈಗೆ ಉದ್ಯೋಗ ಕಲ್ಪಿಸಲು ವರ್ಧಮಾನ ಪರಿವಾರ್ ಸೇವಾ ಟ್ರಸ್ಟ್ ನಿರಂತರ ಶ್ರಮಿಸುತ್ತಿದೆ. ಇದರ ಲಾಭವನ್ನು ಎಲ್ಲ ಸಮಾಜದ ಮಹಿಳೆಯರು ಪಡೆಯಬೇಕೆಂದರು ಸಂದರ್ಭದಲ್ಲಿ ಅರ್ಚನಾ ಮಗದುಮ, ದಕ್ಷಿನ ಭಾರತ ಜೈನ ಸಭೆಯ ಕಾರ್ಯದರ್ಶಿ ಬಾಳಾಸಾಹೇಬ ಪಾಟೀಲ, ಪ್ರವೀಣ್ ಜೈನ್, ಬಬಿತಾ ಜೈನ್, ಹೇತಲ ಮಕವಾನ್, ಆರ್ ಬಿ ಖೋತ ಭಾವುಸಾಹೇಬ ಖೋತ, ವೃಷಭ ಬಾಳಿಕಾಯಿ, ಸುದರ್ಶನ ಖೋತ ಸೇರಿದಂತೆ ವಿವಿಧ ಮಹಿಳಾ ಸಂಘಟನೆಯ ಕಾರ್ಯಕರ್ತರು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ವರದಿ : ಮಹಾವೀರ ಚಿಂಚಣೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!