ಚಿಕ್ಕಮಗಳೂರು : ಚೌಟ್ರಿವರೆಗೂ ಬಂದ ಮದುಮಗಳೊಬ್ಬಳು ತನಗೆ ಈ ವಿವಾಹ ಬೇಡ ಎಂದು ಹಿಂದಿರುಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ.
ವರನ ಮೇಲೆ ರೇಪ್ ಕೇಸ್ ಇದ್ದು, ಆತ ಕುಡುಕನಾಗಿರುವ ಕಾರಣ ತನಗೆ ಈ ವಿವಾಹ ಇಷ್ಟವಿಲ್ಲ ಎಂದು ವಧು ವಾಪಸ್ ಆಗಿದ್ದಾಳೆ.
ಶೃಂಗೇರಿಯ ಈಡಿಗರ ಸಮುದಾಯ ಭವನದಲ್ಲಿ ಶೃಂಗೇರಿಯ ಯುವಕನ ಜೊತೆ ಬಾಳೆಹೊನ್ನೂರಿನ ಯುವತಿ ವಿವಾಹ ಇಂದು ನಿಶ್ಚಯಗೊಂಡಿತ್ತು. ಎಷ್ಟೇ ಮನವೊಲಿಸಲು ಯತ್ನಿಸಿದ್ರೂ ಮದುವೆಗೆ ಯುವತಿ ಒಪ್ಪಿಲ್ಲ ಎನ್ನಲಾಗಿದೆ. ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




