Ad imageAd image

ಬಟ್ಟೆಯಿಂದ ತಯಾರಿಸಿದ ಡಸ್ಟರ್ ಉಪಯೋಗ: ಅನುಧಾನ ಲೂಟಿ ಮಾಡುತ್ತಿರುವ ಮುಖ್ಯ ಗುರುಗಳು ಪುಷ್ಪ

Bharath Vaibhav
ಬಟ್ಟೆಯಿಂದ ತಯಾರಿಸಿದ ಡಸ್ಟರ್ ಉಪಯೋಗ: ಅನುಧಾನ ಲೂಟಿ ಮಾಡುತ್ತಿರುವ ಮುಖ್ಯ ಗುರುಗಳು ಪುಷ್ಪ
WhatsApp Group Join Now
Telegram Group Join Now

ಸೇಡಂ: ತಾಲೂಕಿನ ಸಿಲಾರಕೋಟ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಪುಷ್ಪ ಅವರು ತನ್ನ ಮನಬಂದಂತೆ ನಡವಳಿಕೆ ನಡೆಸುತ್ತಿದ್ದಾರೆ.

ವರ್ಷದಲ್ಲಿ ಬರುವ ಅನುಧಾನದಲ್ಲಿ ಡಸ್ಟರ್ ಖರೀದಿ ಮಾಡಿದ್ದಾರೆಯೇ ಅಥವಾ ಇಲ್ಲಾ ಎಂಬುದು ಸಂಶಯವಾಗಿದೆ. ಮಕ್ಕಳಿಂದಲೇ ಮನೆಯಿಂದ ಬಟ್ಟೆ ಮುಖಾಂತರ ತಯಾರಿಸಿದ ಡಸ್ಟರ್ ಉಪಯೋಗ ಮಾಡಿ ಮಕ್ಕಳಿಗೆ ಸೈಡ್ ಎಫೆಕ್ಟ್ಸ್ ತರುವಂತಹ ಕ್ರೂರತ್ವಕ್ಕೆ ಕೈ ಹಾಕಿದರೆ ಇಲ್ಲಿನ ಮುಖ್ಯ ಗುರುಗಳು. ಇದಷ್ಟೇ ಅಲ್ಲ ಶಿಕ್ಷಣದಲ್ಲೂ ಶಾಲಾ ಮಕ್ಕಳಿಗೆ ನಿರ್ಲಕ್ಷ್ಯ ಮಾಡುತ್ತಿರುವರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲದೆ ಸಾರ್ವಜನಿಕರು ಅಥವಾ ಮಕ್ಕಳ ಪೋಷಕರು ಪ್ರಶ್ನೆ ಮಾಡಿದಾಗ ಇದು ನನ್ನ ಶಾಲೆ ನನ್ನ ಇಷ್ಟ ಎಂಬಂತೆ ವರ್ತನೆ ಮಾಡುತ್ತಿದ್ದಲ್ಲದೆ ನಿಮಗೆ ಅನುಮತಿ ಇಲ್ಲ ಹೊರಗೆ ಹೋಗಿ ಎಂದು ನೇರವಾಗಿ ಮಾತನಾಡುತ್ತಾಳೆ ಮುಖ್ಯ ಶಿಕ್ಷಕಿ ಪುಷ್ಪ. ಅವರ ವರ್ತನೆಗೆ ಲೆಕ್ಕವಿಲ್ಲದಂತೆ ಆಗಿದೆ. ಈ ಕುರಿತು ಬಿಇಒ ಅವರ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುತ್ತಿಲ್ಲ. ಶಾಲೆಯ ಶಿಸ್ತು ಮತ್ತು ಸ್ವಚ್ಛತೆಯನ್ನು ಕಾಪಾಡಬೇಕಾದ ಶಿಕ್ಷಣಾಧಿಕಾರಿಗಳು ಮತ್ತು ಮುಖ್ಯ ಗುರುಗಳ ಈ ವರ್ತನೆ ಸಾರ್ವಜನಿಕರಿಗೆ ಬೇಸರವೆನಿಸಿದೆ.

ಮದ್ಯಾಹ್ನದ ಊಟದ ಅಕ್ಕಿ ಮತ್ತು ಮೊಟ್ಟೆ ಬಾಳೆಹಣ್ಣಿನಲ್ಲಿ ಕೂಡ ಅವ್ಯವಹಾರ ನಡೆದಿರಬಹುದು ಎಂಬ ಅನುಮಾನಗಳು ಕೂಡ ಕೇಳಿ ಬರುತ್ತಿವೆ ಹಾಗೆ ಅಡಿಗೆ ಸಿಬ್ಬಂದಿಯವರ ನೇಮಕಾತಿಯಲ್ಲಿ ಸಹ ಅವ್ಯವಹಾರ ಮಾಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವರದಿ : ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!