Ad imageAd image

ಇರಾನ್‌ನ ನಾಯಕ ಖಮೇನಿ ಹತ್ಯೆ ಧೃಢ : 7ದಿನ ರಜೆ, 40 ದಿನ ಶೋಕಾಚರಣೆ 

Bharath Vaibhav
ಇರಾನ್‌ನ ನಾಯಕ ಖಮೇನಿ ಹತ್ಯೆ ಧೃಢ : 7ದಿನ ರಜೆ, 40 ದಿನ ಶೋಕಾಚರಣೆ 
WhatsApp Group Join Now
Telegram Group Join Now

ತೆಹ್ರಾನ್/ಜೆರುಸಲೇಂ: ಇರಾನ್‌ನ ಅತ್ಯುನ್ನತ ಧಾರ್ಮಿಕ ಮತ್ತು ರಾಜಕೀಯ ನಾಯಕ ಆಯತೊಲ್ಲಾ ಸೈಯದ್ ಅಲಿ ಖಮೇನಿ (86) ಅವರು ಇಸ್ರೇಲ್ ಮತ್ತು ಅಮೆರಿಕದ ಜಂಟಿ ವಾಯುದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ವಿಚಾರವನ್ನು ಇಸ್ರೇಲಿ ಅಧಿಕಾರಿಗಳು ಮತ್ತು ಇರಾನ್‌ನ ಸರ್ಕಾರಿ ಮಾಧ್ಯಮಗಳು ದೃಢಪಡಿಸಿವೆ.

ಇಸ್ರೇಲ್ ಮತ್ತು ಅಮೆರಿಕ ಪಡೆಗಳು ಇರಾನ್‌ನ ಮೇಲೆ ನಡೆಸಿದ ಭೀಕರ ವೈಮಾನಿಕ ದಾಳಿಯ ನಂತರ, ತೆಹ್ರಾನ್‌ನಲ್ಲಿರುವ ಖಮೇನಿ ಅವರ ನಿವಾಸದ ಅವಶೇಷಗಳ ಅಡಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಹಿರಿಯ ಇಸ್ರೇಲಿ ಅಧಿಕಾರಿಯೊಬ್ಬರು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇರಾನ್ ಸರ್ಕಾರದಿಂದ ದೃಢೀಕರಣ: ಆರಂಭದಲ್ಲಿ ಈ ಸುದ್ದಿಯನ್ನು ನಿರಾಕರಿಸಿದ್ದ ಇರಾನ್ ಸರ್ಕಾರಿ ಟಿವಿ ಮತ್ತು ಮಾಧ್ಯಮಗಳು, ಇಂದು ಬೆಳಗ್ಗೆ (ಮಾರ್ಚ್ 1, 2026) ಅಧಿಕೃತವಾಗಿ ಖಮೇನಿ ಅವರ ನಿಧನವನ್ನು ಖಚಿತಪಡಿಸಿವೆ.

40 ದಿನಗಳ ಶೋಕಾಚರಣೆ: ಇರಾನ್‌ನ ಅತ್ಯುನ್ನತ ನಾಯಕನ ನಿಧನದ ಹಿನ್ನೆಲೆಯಲ್ಲಿ ದೇಶಾದ್ಯಂತ 40 ದಿನಗಳ ಸಾರ್ವಜನಿಕ ಶೋಕಾಚರಣೆಯನ್ನು ಘೋಷಿಸಲಾಗಿದೆ. ಅಲ್ಲದೆ, ಒಂದು ವಾರಗಳ ಕಾಲ ರಾಷ್ಟ್ರೀಯ ರಜೆಯನ್ನು ಇರಾನ್ ಸರ್ಕಾರ ಪ್ರಕಟಿಸಿದೆ.

ದಾಳಿಯ ಹಿನ್ನೆಲೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶನಿವಾರ ನಡೆದ ಜಂಟಿ ಕಾರ್ಯಾಚರಣೆಯನ್ನು ದೃಢಪಡಿಸಿದ್ದು, ಇರಾನ್‌ನ ಅಣುಶಕ್ತಿ ಕೇಂದ್ರಗಳು ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿತ್ತು ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!