ಸಿಂಧನೂರು : ತಾಲೂಕಿನ ಬಸಾಪುರ ಕೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಂಬುನಾಥನಹಳ್ಳಿಯ ಅಮರೇಶ ಹಳ್ಳಿಯಪುರ ಎಂಬುವರಿಗೆ ಸೇರಿದ ಬಣವೆಗೆ ಬೆಂಕಿ ಆಕಸ್ಮಿಕ ತಗಲಿ ಸುಮಾರು 5 ಲಕ್ಷ ಮೌಲ್ಯದ ಮೇವು ಬೆಂಕಿಗೆ ಆವುತಿಯಾದ ಘಟನೆ ಗಾಂಧಿನಗರ ಏರಿಯಾದ ಜಂಬುನಾಥಹಳ್ಳಿಯಲ್ಲಿ ರವಿವಾರ ಸಂಭವಿಸಿದೆ.ಬಣವೆಗೆ ಸಂಬಂಧಪಟ್ಟ ಅಮರೇಶ ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ , ಅಗ್ನಿಶಾಮಕ ದಳದವರಿಗೆ ತಿಳಿಸಿದ್ದಾರೆ ಅಷ್ಟೊತ್ತಿಗೆಲ್ಲ ಬಣವೆ ಉರಿದು ಬಸ್ಮವಾಗಿದೆ.
ಬೇಸಿಗೆ ಕಾಲದಲ್ಲಿ ಹಸುಗಳಿಗೆಂದು ಹುಲ್ಲನ್ನು ಶೇಖರಿಸಿ ಇಡಲಾಗಿತ್ತು ಆದರೆ ಆಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ಮೌಲ್ಯದ ಹುಲ್ಲು ನಾಶವಾಗಿದೇ ಮತ್ತೆ ಹಸುಗಳಿಗೆ ಮೇವು ಎಲ್ಲಿಂದ ತರಬೇಕೆಂಬ ಚಿಂತಿಯಾಗಿದೆ ಎಂದು ಬಣವೆ ಮಾಲೀಕ ಅಮರೇಶ್ ಚಿಂತೆಗೀಡಾಗಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ
ವರದಿ:ಬಸವರಾಜ ಬುಕ್ಕನಹಟ್ಟಿ




