ನಿಪ್ಪಾಣಿ :ತಾಲೂಕಿನ ಬೇಡಕಿಹಾಳ ಗ್ರಾಮದ ಸಿದ್ದೇಶ್ವರ ಮಂದಿರದಲ್ಲಿ ಶನಿವಾರ ಮಧ್ಯಾಹ್ನ ಸದಲಗಾ ಪೊಲೀಸ್ ಠಾಣೆಯ ಪೊಲೀಸರಿಂದ ಹೋಳಿ ಹಾಗೂ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ ಸಭೆ ಕರೆಯಲಾಗಿತ್ತು.
ಈ ಸಂಧರ್ಭದಲ್ಲಿ ಪೊಲೀಸ್ ಇಂಚಾರ್ಜ್ ಎಸ್ ಎಂ. ಸನದಿ ಮಾತನಾಡಿ ಮುಂಬರುವ ಹೋಳಿ ಹಾಗೂ ರಂಜಾನ್ ಹಬ್ಬದಲ್ಲಿ ಗ್ರಾಮದ ವಿವಿಧ ಸಂಘಟನೆಗಳು ಸಾರ್ವಜನಿಕರು ಹೋಳಿ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು ಯಾವುದೇ ಅಹಿತಕರ ಘಟನೆ ನಡೆಯದಂತೆ ಎತ್ತರವಹಿಸಬೇಕು. ಈ ಸಂದರ್ಭದಲ್ಲಿ ಮೋಟಾರ್ ಬೈಕ್ ಸೈಲೆನ್ಸ್ ತೆಗೆದು ಕರ್ಕಶ ದ್ವನಿಯಲ್ಲಿ ಓಡಿಸುವುದು ಗುಂಪುಗಟ್ಟಿ ದಾಂದಲೆ ಮಾಡುವುದು ಮುಂತಾದ ಕೃತ್ಯಗಳು ಕಂಡು ಬಂದರೆ ಅವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಶಾಂತಿ ಸಭೆಯಲ್ಲಿ ಪೊಲೀಸ್ ಬೀಟ್ ಉದಯ ಕಾಂಬಳೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಊರಿನ ಮುಖಂಡರು ಉಪಸ್ಥಿತರಿದ್ದರು.
ವರದಿ:ಮಹಾವೀರ ಚಿಂಚಣೆ




