Ad imageAd image

ಇಂದಿನಿಂದ ಮಾ.೬ ವರಿಗೆ ಮಾಣಿಕಪ್ರಭು ಜಾತ್ರೆ

Bharath Vaibhav
ಇಂದಿನಿಂದ ಮಾ.೬ ವರಿಗೆ ಮಾಣಿಕಪ್ರಭು ಜಾತ್ರೆ
WhatsApp Group Join Now
Telegram Group Join Now

ಐಗಳಿ : ಇಂದಿನಿಂದ ಮಾ. ೬ ರ ವರೆಗೆ ಐಗಳಿ ಕ್ರಾಸ ದಲ್ಲಿರುವ ಶ್ರೀ ಮಾಣಿಕಪ್ರಭು ವಿರಕ್ತಮಠದ ಜಾತ್ರಾ ಮಹೋತ್ಸವವು ಹಾಗೂ ಗ್ರಾಮ ಪಂಚಾಯತ, ತಾಲೂಕು ಪಂಚಾಯತ, ಅಥಣಿ ಎಪಿಎಂಸಿ, ಪಶುಸಂಗೋಪನಾ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ಪ್ರಮಾಣದ ದನಗಳ ಪ್ರದರ್ಶನವು ಜರುಗಲಿದೆ.

ಸೋಮವಾರ ದಿ. ೨ ರಂದು ಮುಂಜಾನೆ ಪೂಜಾ ಹಾಗೂ ಪೂಜ್ಯಶ್ರೀ ಅಭಿನವ ರಾಚೋಟೇಶ್ವರ ದೇವರ ನೇತೃತ್ವದಲ್ಲಿ ಆಧ್ಯಾತ್ಮಿಕ ಪ್ರವಚನದೊಂದಿಗೆ ಜಾತ್ರೆ ಪ್ರಾರಂಭವಾಗಿ, ರಾತ್ರಿ ಬುರ್ಲಟ್ಟಿ ಹಾಗೂ ವಿವಿಧ ಗ್ರಾಮದವರಿಂದ ಭಜನೆ ಮನರಂಜನೆ ಕಾರ್ಯಕ್ರಮ ಇರುವವು. ಮಂಗಳವಾರ ದಿ ೩ ರಂದು ರುದ್ರಾಭಿಷೇಕ, ಭಕ್ತರಿಂದ ದೀರ್ಘದಂಡ ನಮಸ್ಕಾರ, ನೈವೆಧ್ಯ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಪದಗಳು, ಸಂಜೆ ೪ ಗಂಟೆಗೆ ಕಡುಬಿನ ಕಾಳಗ ಹಾಗೂ ಪಲ್ಲಕ್ಕಿ ಉತ್ಸವ, ರಾತ್ರಿ ವೀರ ಸಿಂಧೂರ ಲಕ್ಷ್ಮಣ ಬೈಲಾಟ, ಮುಧೋಳ ಗ್ರಾಮದವರಿಂದ ಸಂಗ್ಯಾ ಬಾಳ್ಯಾ ಬೈಲಾಟ ಇರುವದು. ಬುದವಾರ ದಿ ೪ ರಂದು ಮುಂ ೮ ರಿಂದ ೧೧ ರವರೆಗೆ ದನಗಳ ಪಾಸ ಆರಿಸುವದು, ಸಂಜೆ ೪ ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ ಭವ್ಯ ರಥೋತ್ಸವ, ಅನ್ನ ಪ್ರಸಾದ, ಸಂಜೆ ಕೀರ್ತನೆ, ಭಜನೆ, ರಾತ್ರಿ ಲವಕುಶ ಪೌರಾಣೀಕ ಬೈಲಾಟ ಇರುವದು. ಗುರುವಾರ ದಿ ೫ ರಂದು ಮಧ್ಯಾಹ್ನ ೧ ಕ್ಕೆ ಸರಪಳಿ ಹರಿಯುವ ಕಾರ್ಯಕ್ರಮ, ೨ ಕ್ಕೆ ಅಗ್ನಿ ಪ್ರವೇಶ, ಪಾರಿತೋ಼ಷಕ ವಿತರಣಾ ಸಮಾರಂಭ, ರಾತ್ರಿ ೮ ಕ್ಕೆ ಹಾಸ್ಯ ರಸಮಂಜರಿ ಕಾರ್ಯಕ್ರಮ ಇರುವದು. ಶುಕ್ರವಾರ ದಿ ೬ ರಂದು ಗೊಬ್ಬರ ನಿಲಾವು, ೩ ರಿಂದ ಸಂಜೆ ೫ ರವರೆಗೆ ಜಂಗಿ ಕುಸ್ತಿಗಳು ಜರುಗುವವು ಎಂದು ಪ್ರಕಟಣೆಯಲ್ಲಿ ಜಾತ್ರಾ ಕಮೀಟಿ ಅಧ್ಯಕ್ಷ ಪ್ರಲ್ಹಾದ ಪಾಟೀಲ ತಿಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!