Ad imageAd image

ಅರ್ಧಕ್ಕೆ ನಿಂತ ಅಂಬಿಗರ ಚೌಡಯ್ಯ ಭವನ ಕಾಮಗಾರಿ ಪೂರ್ಣಗೊಳಿಸುವಂತೆ : ರಾಹುಲ್ ಟಿ ಯಾಕಾಪುರ ಆಗ್ರಹ

Bharath Vaibhav
ಅರ್ಧಕ್ಕೆ ನಿಂತ ಅಂಬಿಗರ ಚೌಡಯ್ಯ ಭವನ ಕಾಮಗಾರಿ ಪೂರ್ಣಗೊಳಿಸುವಂತೆ : ರಾಹುಲ್ ಟಿ ಯಾಕಾಪುರ ಆಗ್ರಹ
WhatsApp Group Join Now
Telegram Group Join Now

ಸೇಡಂ: ಸೇಡಂ ಮತ ಕ್ಷೇತ್ರದ ವ್ಯಾಪ್ತಿಗೆ ಬರುವ ಸುಲೇಪೇಟ ಗ್ರಾಮದ ವಾರ್ಡ್ ನಂ 5 ಆಶ್ರಯ ಕಲೋನಿಯಲ್ಲಿರುವ ಇರುವ ಶ್ರೀ ಅಂಬಿಗರ ಚೌಡಯ್ಯ ಭವನ ಅರ್ಧಕ್ಕೆ ನಿಂತಿದ್ದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಬಹುಜನ ಸಮಾಜ ಪಕ್ಷದ ಹೋಬಳಿ ಘಟಕದ ರಾಹುಲ್ ಟಿ ಯಾಕಾಪುರ ಅವರು ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ಅಂಬಿಗರ ಚೌಡಯ್ಯ ಭವನವು ಸುಮಾರು ಎರಡು ವರ್ಷಗಳಿಂದ ಪೂರ್ಣಗೊಳಿಸದೆ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ ಇದರಿಂದ ಭವನ ಪಾಳು ಬೀಳುತ್ತಿದೆ ಸದ್ಯ ಇದು ಬಿಡಾಡಿ ದನಗಳ ಹಾವಳಿ ಮತ್ತು ಕುಡುಕರ ತಾಣವಾಗಿ ಮಾರ್ಪಟ್ಟಿದೆ ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸುಮಾರು 25ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಿಸಲಾದ ಶ್ರೀ ಅಂಬಿಗರ ಚೌಡಯ್ಯ ಭವನದ ಕಾಮಗಾರಿಯು ಅರ್ಧಕ್ಕೆ ನಿಂತಿರುವುದರಿಂದ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಮಾಡಿಕೋಳಲು ಕ್ಷೇತ್ರದ ಶಾಸಕರು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾಮಗಾರಿ ಪೂರ್ಣಗಳಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ವರದಿ : ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!