Ad imageAd image

ಮುತ್ತೂರ ಗ್ರಾಮದಲ್ಲಿ ನೂತನ ಶಾಲಾ ಕಟ್ಟಡ ಉದ್ಪಾಟನ ಸಮಾರಂಭ

Bharath Vaibhav
ಮುತ್ತೂರ ಗ್ರಾಮದಲ್ಲಿ ನೂತನ ಶಾಲಾ ಕಟ್ಟಡ ಉದ್ಪಾಟನ ಸಮಾರಂಭ
WhatsApp Group Join Now
Telegram Group Join Now

ಬಾಗಲಕೋಟೆ : ಜಿಲ್ಲೆಯ ಜಮಖಂಡಿ ತಾಲೂಕಿನ ಮುತ್ತೂರ ಗ್ರಾಮದಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಹಾಗೂ ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ ಕ್ಷೇತ್ರ ಶಿಕ್ಷಾಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಧಿಕಾರಿಗಳ ಕಾರ್ಯಾಲಯ ಜಮಖಂಡಿ ಶ್ರೀ ದುಂಡಪ್ಪ ಸಂಗಪ್ಪ ಹಿಪ್ಪರಗಿ ಸರಕಾರಿ ಪ್ರೌಡ ಶಾಲೆ (R M S A ) ಮುತ್ತೂರ ನೂತನ ಶಾಲಾ ಕಟ್ಟಡ ಉದ್ಪಾಟನ ಸಮಾರಂಭ ಅತಿಥಿಗಳಿಂದ ಹಾಗೂ ಪರಮಪೂಜ್ಯರಿಂದ ರಿಬ್ಬನ ಕತ್ತರಿಸುವ ಮೂಲಕ ಕಾರ್ಯಕ್ರಮಗೆ ಚಾಲನೆ ನೀಡಿದರು ನಂತರ ವೇದಿಕೆ ಮೇಲೆ ನಾಡಗೀತೆ ಹಾಗೂ ರೈತ ಗೀತೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು

ನಂತರ ಕಾರ್ಯಕ್ರಮದ ಸ್ವಾಗತವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀ ಏ ಕೆ ಬಸನ್ನವರ ನೆರವೇರಿಸಿ ಕೊಟ್ಟರು
ನಂತರ ಪರಮಪೂಜ್ಯರಿಗೆ ಹಾಗೂ ಅತಿಥಿಗಳಿಗೆ ಸತ್ಕರಿಸಿಸಲಾಯಿತು ತದ ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಮುತ್ತಣ್ಣ ಹಿಪ್ಪರಗಿ ಅವರು ನಮ್ಮ ತಂದೆಯವರು ಕೂಡಾ ಶಿಕ್ಷಣ ಪ್ರೇಮಿಗಳಾಗಿದ್ದರು ಹಾಗೂ ನನ್ನ ಗ್ರಾಮದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ತೊಂದರೆಯಾಗಬಾರದೆಂದು ನಾವು ಶಿಕ್ಷಣಕ್ಕೆ ಒಂದು ಎಕರೆ ನೀಡಿದ್ದು ಅದೆನ್ನು ದೊಡ್ಡ ವಿಷಯವಲ್ಲ ನಮಗೆ ಯಾವುದೇ ಸನ್ಮಾನದ ಅವಶ್ಯಕತೆ ಇಲ್ಲ ಕೊಡುಗೆ ನೀಡಿದ ಮೇಲೆ ಅದು ಯಾವುದೇ ಕಾರಣಕ್ಕೆ ನಮ್ಮದಾಗಲ್ಲ ಎಂದು ಮಾತನಾಡಿದರು

ನಂತರ ಪರಮಪೂಜ್ಯರು ಅಧ್ಯಕ್ಷರು ಅತಿಥಿಗಳು ಸೇರಿ ಜ್ಯೋತಿ ಬೆಳಗಿಸಿದರು. ನಂತರ ಕಾರ್ಯಕ್ರಮದ ಕುರಿತು ಮಾತನಾಡಿದ ಜಮಖಂಡಿ ಶಾಸಕರು ನಾಡೋಜ ಜಗದೀಶ ಗುಡಗುಂಟಿ ಅವರು ಜೀವನದಲ್ಲಿ ಗುರುವಿನ ಪಾತ್ರ ಬಹಳ ದೊಡ್ಡದು ಎಲ್ಲರೂ ಉತ್ತಮವಾಗಿ ಶಿಕ್ಷಣ ಪಡೆದುಕೊಳ್ಳಬೇಕು ನಾನು ಸಹ ಕಠಿಣ ಬಡತನ ಪರಿಸ್ಥಿತಿಯಲ್ಲಿ ಕಲಿತು ಇಂಜನಿಯರ ವ್ಯಾಸಂಗ ಪೂರ್ಣಗೊಳಿಸಿದೆ ನಾನು ಸಹ ಬೇರೆಯವರ ಕೈಯಲ್ಲಿ ಕಡಿಮೇ ಸಂಬಳದಲ್ಲಿ ಕೆಲಸ ಮಾಡಿದ್ದೆನ್ನೇ ಈಗ ಅದೆಷ್ಟೋ ಕಾರ್ಮಿಕರಿಗೆ ಉದ್ಯೋಗ ನೀಡಿದ್ದೆನ್ನೆ ನಾನು ಕೂಡಾ ಶಾಶಕ ಆಗುತ್ತೆನ್ನೆ ಎಂದು ಯಾವಾಗಲೂ ವಿಚಾರ ಮಾಡಿಲ್ಲ ಎಲ್ಲ ಹಣೆಬರಹ ನಾವು ಹಾಗೂ ಶಾಲೆಗೆ ಜಮೀನು ನೀಡಿದ ಮುತ್ತಣ್ಣ ಹಿಪ್ಪರಗಿ ಅವರು ಸರಿ ಸುಮಾರು 20 ವರ್ಷಗಳಿಂದ ಉತ್ತಮ ಬಾಂಧವ್ಯ ಹೊಂದಿದ್ದೆವ್ವೆ ಅವರು ಇನ್ನು ಎತ್ತರಮಟ್ಟಕ್ಕೆ ಬೆಳೆಯಲಿ ಶಾಲೆ ಬೇಕಾದ ಎಲ್ಲ ಅನುಕೂಲತೆಗಳನ್ನು ನಾನು ಮಾಡಿ ಕೊಡುತ್ತೆನ್ನೆ ಎಂದು ಹೇಳಿದರು

ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ಪರಮಪೂಜ್ಯ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ರಾಚೋಟೇಶ್ವರ ವಿರಕ್ತ ಮಠ ಮುತ್ತೂರ ಪಾವನ ಸಾನಿಧ್ಯ ಪರಮಪೂಜ್ಯ ಶ್ರೀ ಪರಿಪೂರ್ಣನಂದ ಭಾರತಿ ಮಹಾಸ್ವಾಮಿಗಳು ಸಿದ್ದಾರುಡ ಮಠ ಮುತ್ತೂರ ,ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಡೋಜ ಶ್ರೀ ಜಗದೀಶ ಗುಡಗುಂಟಿ ಸನ್ಮಾನ್ಯ ಶಾಶಕರು ಜಮಖಂಡಿ ವಿಧಾನ ಸಭಾ ಮತಕ್ಷೇತ್ರ, ಸುನೀಲಗೌಡ ಪಾಟೀಲ ಹಾಗೂ ಗ್ರಾಮಸ್ಥರಾದ ಮುತ್ತಣ್ಣ ಗಡೆಪ್ಪಣ್ಣವರ ,ಹನಮಂತ ಹಿಪ್ಪರಗಿ ಪ್ರಕಾಶ ಹಿಪ್ಪರಗಿ, ಬಸವಂತ ಹಿಪ್ಪರಗಿ ಸೇರಿದಂತೆ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು

ವರದಿ: ಬಂದೇನವಾಜ ನದಾಫ್ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!